ಮಂಗಳೂರು ಅ13: ಇಲ್ಲಿನ ಪೋಲಿಸ್ ಲೇನ್ ನಲ್ಲಿರುವ ವಸತಿ ಸಮುಚ್ಚಯಕ್ಕೆ ನುಗ್ಗಿದ ಕಳ್ಳರು ಪೋಲಿಸ್ ಒಬ್ಬರ ಮನೆಗೇ ಕನ್ನ ಹಾಕಿದ ಘಟನೆ ನಡೆದಿದೆ.
ಅಕ್ಟೋಬರ್ 10 ರಂದು ಸಾಯಂಕಾಲ ಸುಧೀರ್ ಕುಮಾರ್ ಎಂಬವರು ತಮ್ಮ ತಾಯಿಯನ್ನು ಫ್ಲ್ಯಾಟಿನಲ್ಲಿ ಬಿಟ್ಟು ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದರು. ಮರುದಿನ ಸುಧೀರ್ ರವರ ತಾಯಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಧಾಕಲಾಗಿದ್ದರು. ನಿನ್ನೆ ತಾಯಿ ಹಾಗೂ ಮಗ ಮನೆಗೆ ಬಂದಾಗ ಮನೆಗೆ ಜಡಿದ ಬೀಗ ಒಡೆದು ಬಾಗಿಲು ತೆರೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಳಗೆ ಹೋಗಿ ಪರಿಶೀಲಿಸಿದಾಗ ಕಪ್ ಬೋರ್ಡಿನಲ್ಲಿ ಭದ್ರವಾಗಿ ಇಡಲಾಗಿದ್ದ ಚಿನ್ನಡ ಒಡವೆಗಳು ಕಳವಾದ ಬಗ್ಗೆ ಗಮನಕ್ಕೆ ಬಂದಿದೆ.
ಕಳವಾದ ಚಿನ್ನದ ಒಟ್ಟು ಮೌಲ್ಯ 1.4 ಲಕ್ಷ ಮೀರಬಹುದೆಂದು ಅಂದಾಜಿಸಲಾಗಿದೆ.ಪಾಂಡೇಶ್ವರ ಪೋಲಿಸರು ಕೇಸು ಧಾಕಲಿಸಿ ತನಿಖೆ ನಡೆಸುತ್ತಿದ್ದಾರೆ.