Karavali
ಮಂಗಳೂರಿಗೆ ಮನಸೋತಿದ್ದೇನೆ- ಜಿಲ್ಲಾಧಿಕಾರಿಯೊಂದಿಗೆ ದಾಯ್ಜಿ ವಲ್ಡ್ ವಿಶೇಷ ಸಂದರ್ಶನ
- Fri, Oct 13 2017 11:32:27 AM
-
ಮಾನಸ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ಆಡಳಿತ ನಡೆಸಿ ನಿರ್ಗಮಿಸುತ್ತಿರುವ, ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನಿರ್ದೇಶಕರಾಗಿ ಭಡ್ತಿ ಹೊಂದಿದ ಜಿಲ್ಲಾಧಿಕಾರಿ ಡಾ.ಕೆ ಜಿ ಜಗದೀಶ್, ಜಿಲ್ಲೆಯೊಂದಿಗಿನ ಒಡನಾಟದ ಮನದಾಳ ಮಾತುಗಳನ್ನು "ದಾಯ್ಜಿವಲ್ಡ್ " ಜತೆ ವಿಶೇಷ ಸಂದರ್ಶನದ ಮೂಲಕ ಹಂಚಿಕೊಂಡಿದ್ದಾರೆ.
ಒಂದು ವರ್ಷದ ಒಡನಾಟದಲ್ಲಿ ನೀವು ಕಂಡಂತೆ ದಕ್ಷಿಣ ಕನ್ನಡ ಜಿಲ್ಲೆ?
ನಾನು ಮೂಲತಃ ತುಮಕೂರಿವನು. ಆದರೆ ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನು ಬಹಳ ಇಷ್ಟಪಟ್ಟೆ. ನನ್ನ ಸೇವಾವಧಿಯಲ್ಲಿ ಮಂಗಳೂರಿನಲ್ಲಿ ಸೇವೆ ಸಲ್ಲಿದ ಬಗ್ಗೆ ನನಗೆ ಹೆಮ್ಮೆ ಇದೆ. ಕರಾವಳಿಯ ಜನ ಸ್ನೇಹಜೀವಿಗಳು ಇಲ್ಲಿನ ಜನ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿ ಪಡೆದುಕೊಳ್ಳುವ ಗುಣ ನನಗೆ ಬಹಳ ಅಚ್ಚುಮೆಚ್ಚು.
ಹಾಗಾದರೆ ಜಿಲ್ಲೆ ಬಿಟ್ಟು ಹೋಗಲು ನಿಮಗೆ ಬೇಸರವಿದೆಯಾ?
ಹೌದು ಖಂಡಿತಾ ಬೇಸರವಿದೆ. ಕಾರಣ ನನ್ನ ವೈಯಕ್ತಿಕ ಅನಿವಾರ್ಯ ಕಾರಣಗಳಿಗಾಗಿ ನಾನೇ ಸರ್ಕಾರದಿಂದ ವರ್ಗಾವಣೆಯನ್ನು ಬಯಸಿದ್ದೆ. ಆದರೆ ದಕ್ಷಿಣ ಕನ್ನಡದಂಥ ಒಂದು ಉತ್ತಮ ಜಿಲ್ಲೆಯನ್ನು ಬಿಟ್ಟು ಹೋಗುವ ನೋವು ಖಂಡಿತಾ ಇದೆ.ಜಿಲ್ಲೆಯಲ್ಲಿ ನಿಮ್ಮ ಸೇವೆ ಕೇವಲ, ಒಂದು ವರ್ಷ ಈ ಅವಧಿ ಕಡಿಮೆ ಅನಿಸಿಲ್ವಾ?
ಇಲ್ಲ, ಒಂದು ವರ್ಷ ಖಂಡಿತವಾಗಿಯೂ ಒಳ್ಳೆಯ ಅವಧಿಯೇ. ಆದರೆ ಅಭಿವೃದ್ಧಿ ವಿಚಾರಗಳು ಬಂದಾಗ, ಎರಡು-ಮೂರು ವರ್ಷಗಳ ಸುದೀರ್ಘ ಅವಧಿ ಇದ್ದಾಗ ಮಾತ್ರ ದೊಡ್ಡ ಮಟ್ಟದ ಬದಲಾವಣೆ ಸಾದ್ಯವಾಗುತ್ತೆ. ಮತ್ತು ದೀರ್ಘಕಾಲಿಕ ಅಭಿವೃದ್ದಿ ಕೆಲಸಗಳಿಗೂ ಉತ್ತಮವಾಗಿ ಸ್ಪಂದಿಸಲು ಸಾದ್ಯವಾಗುತ್ತೆ.ಜಿಲ್ಲೆಯ ಜನರಿಗೆ ಮರಳು ಮಾಫಿಯಕ್ಕೆ ಸೂಕ್ತ ಕಡಿವಾಣ ಹಾಕಿಲ್ಲ್ಲ ಅನ್ನುವ ಅಸಮಾಧಾನವಿದೆ?
ಒಬ್ಬ ಜಿಲ್ಲಾಧಿಕಾರಿ ಅಂದರೆ ಅವರ ಮುಂದೆ ಬಹಳಷ್ಟು ಸವಾಲುಗಳಿರುತ್ತೆ. ಹಾಗಂತ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗೋದಿಲ್ಲ.ಗೆಲುವು ಮತ್ತು ಸೋಲು ಸಹಜ. ಜನ ನೀವು ಎಡವಿದ್ದೀರಿ ಅಂದರೆ ಅದನ್ನು ಪ್ರಮಾಣಿಕತೆಯಿಂದಲೇ ಸ್ವಾಗತಿಸಲು ಸಿದ್ದನಿದ್ದೇನೆ. ಆದ್ರೆ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡಿರುವುದಂತು ನಿಜ, ಆದರೆ ಮರಳು ಮಾಫಿಯವನ್ನು ಪ್ರತಿಶತ ನೂರಕ್ಕೆ ನೂರರಷ್ಟು ತಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ.ಹಾಗಾದರೆ ಮರಳು ದಂಧೆಗೆ ಬ್ರೇಕ್ ಹಾಕುವ ಪ್ರಮಾಣಿಕ ಪ್ರಯತ್ನದಲ್ಲಿ ಬೆದರಿಕೆ ಕರೆಗಳು ಬಹಳಷ್ಟು ಬಂದಿರಬೇಕಲ್ವಾ?
ಇಲ್ಲ ಖಂಡಿತಾ ಇಲ್ಲ. ಬೆದರಿಕೆ ಕರೆ, ರಾಜಕೀಯ ಪ್ರಭಾವ ಬೀರುವ ಘಟನೆಗಳು ನನ್ನ ಸೇವಾ ಅವಧಿಯಲ್ಲಿ ನಡೆದಿಲ್ಲ, ಆದರೆ ಕಠಿಣ ಕ್ರಮದ ದಂಧೆಯನ್ನು ಮಟ್ಟ ಹಾಕಲು ಹೊರಟಾಗ ಅಭಿವೃದ್ದಿ ಕೆಲಸಗಳಿಗೂ ಮರಳು ಸಿಗುತ್ತಿಲ್ಲ ಎನ್ನುವ ಕೂಗೂ ಕೇಳಿ ಬಂದಿದ್ದು ನಿಜ. ಹಾಗಾಗಿ ಅಭಿವೃದ್ದಿ ಮತ್ತು ಕಾನೂನು ಬಾಹಿರ ಚಟುವಟಿಗೆಗಳ ಮೇಲಿನ ಹಿಡಿತವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ.ಜಿಲ್ಲೆಗೆ ಕೋಮು ಗಲಭೆಯ ಎನ್ನುವ ಹಣೆಪಟ್ಟಿ ಬಂದಿದ್ದು ಹೇಗೆ?
ಇಲ್ಲಿ ಜನ ಪ್ರಗತಿಪರರು ಮತ್ತು ಸ್ನೇಹಜೀವಿಗಳು. ಜೈನ, ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದವರು ಭೇದಭಾವವಿಲ್ಲದೆ ಬದುಕುತ್ತಿದ್ದಾರೆ. ಅದರೆ ಇಲ್ಲಿ ಶಾಂತಿಕದಡುವ 2 ಬೇರೆ ಬೇರೆ ಧರ್ಮದ ಗುಂಪುಗಳಿವೆ. ಈ ಗುಂಪಿನಿಂದಲೇ ಗಲಭೆಗಳು ಸೃಷ್ಟಿಯಾಗಿತ್ತೆ. ನಾವು ಕೂಡಾ ಜನ ಸಾಮಾನ್ಯರಿಗೆ ತೊಂದರೆಯಾಗಬಾರದೆಂದು ೧೪೪ ಸೆಕ್ಷನ್, ಮುಂಜಾಗೃತ ಬಂಧನ ಮುಂತಾದ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ನೋವಿನ ಸಂಗತಿ ಎಂದರೆ ಈ ಗಲಭೆಗಳನ್ನು ವೈಭವೀಕರಿಸುವ ಪ್ರಯತ್ನಗಳು ನಡಿತಾ ಇದೆ. ಈ ಗುಂಪುಗಳಿಗೆ ಸಮಾಜದಿಂದ ನೈತಿಕ ಬೆಂಬಲ ಸಿಗದಿದ್ದರೆ ಈ ಸಂಘಟನೆಗಳು ತಾನಾಗಿಯೇ ಸತ್ತು ಹೋಗುತ್ತದೆ.ಹಾಗದ್ರೆ ಮಂಗಳೂರುಗೆ ಕೋಮು ಜಿಲ್ಲೆ ಎನ್ನುವ ಹಣೆ ಪಟ್ಟಿ ಕಟ್ಟಿದ್ದು ಮಾದ್ಯಮನಾ?
ಖಂಡಿತಾ ಅಲ್ಲ, ಆದರೆ ಈ ಸುದ್ದಿಗಳನ್ನು ವೈಭವೀಕರಿಸಿದಷ್ಟು ಅವರಿಗೆ ಪ್ರೇರಣೆ ಸಿಗುತ್ತದೆ. ನಿಜಕ್ಕೂ ಶಾಂತಿಪ್ರೀಯ ಜಿಲ್ಲೆ ದಕ್ಷಿಣ ಕನ್ನಡ .. ಹಾಗೆಂದು ಈ ಸಂಘಟನೆಗಳು ಧರ್ಮವನ್ನು ಮುಂದಿಟ್ಟುಕೊಂಡು ಗಲಭೆ ಎಬ್ಬಿಸೋದ್ರಿಂದ ಈ ವಿಚಾರವನ್ನು ತೀರಾ ನಿರ್ಲಕ್ಷ ಮಾಡಲು ಸಾಧ್ಯವಿಲ್ಲ.ಜಿಲ್ಲೆಯಲ್ಲಿ ಇನ್ನು ಕೂಡಾ ಅಬಿವೃದ್ದಿಯಾಗಬೇಕಾದ ವಿಷಯಗಳು ಯಾವುದು?
ನನ್ನ ಪ್ರಕಾರ ಅಭಿವೃದ್ದಿ ಎನ್ನುವುದು ಪೂರ್ಣ ವಿರಾಮವಿಲ್ಲದ ನಿತ್ಯ ನಿರಂತರ ಕೆಲಸ. ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯ ಅಗತ್ಯವಿದೆ. ಮೂಲಸೌಕರ್ಯ, ನಗರದಲ್ಲಿ ಟ್ರಾಪಿಕ್ ನಿರ್ವಹಣೆ, ಬೆಳೆಯುತ್ತಿರುವ ಮಂಗಳೂರಿಗೆ ರಿಂಗ್ ರೋಡ್ ನಿರ್ಮಾಣ, ನಗರದ ಹೊರವಲಯದಲ್ಲಿ ಬಸ್ ನಿಲ್ದಾಣದ ಸ್ಥಾಪನೆಯಾಗಬೇಕು. ಇವೆಲ್ಲದರ ಹೊರತಾಗಿಯೂ ನಿರುದ್ಯೋಗದ ಸಮಸ್ಯೆ ಇಲ್ಲೂ ಇದೆ ಅದರ ನಿರ್ಮೂಲನೆಯಾಗಬೇಕು. ಮತ್ತು ಸೇವಾ ವಲಯ ಹಾಗೂ ಪ್ರವಾಸೋದ್ಯಮ ವಿಚಾರದಲ್ಲಿ ಜಿಲ್ಲೆಯಲ್ಲಿ ವಿಫುಲ ಅವಕಾಶಗಳು ಇರೋದ್ರಿಂದರ ಇಲ್ಲಿ ಮೊದಲು ಅಬಿವೃದ್ದ್ದಿಯಾಗಬೇಕು.ಉದ್ಯೊಗವಕಾಶದ ಕೊರತೆ ಮಂಗಳೂರಿನಲ್ಲಿ ಇದೆ ಅಂದ್ರಿ.. ಆದರೆ ಸಿವಿಲ್ ಸರ್ವೀಸ್ ಕ್ಷೇತ್ರದಲ್ಲಿ ಮಂಗಳೂರು ಜನ ಮುಂದಡಿ ಇಡುತ್ತಿಲ್ಲಾ ಎಂಬುವುದು ನಿಮ್ಮ ಅನಿಸಿಕೆಯಾ?
ನಾನು ಕಂಡಂತೆ ಇಲ್ಲಿನ ಜನ ಸ್ವಾಭಿಮಾನಿಗಳಾಗಿ ಬದುಕಲು ಇಷ್ಟಪಡುತ್ತಾರೆ. ಸರ್ಕಾರಿ ನೌಕರಾದರೆ ಅವರಿಗೆ ಸ್ಥೀಮಿತ ವಲಯದಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಇಲ್ಲಿನ ಜನ ಇಂಡಸ್ಟ್ರಿ, ಬ್ಯುಸಿನೆಸ್ ಕಡೆ ಜಾಸ್ತಿ ಒಲವು ತೋರಿಸುತ್ತಾರೆ. ಅದರೆ ನಾಗರೀಕ ಸೇವಾ ವಲಯದಲ್ಲಿ ಸ್ಥಳೀಯರು ಬಂದರೆ ಅವರ ಕಾರ್ಯಕ್ಷಮತೆ ಇತರರಿಗೆ ಹೋಲಿಸಿದರೆ ಹೆಚ್ಚಿರುತ್ತೆ. ತುಳು ಜನಕ್ಕೆ ತುಳು ಭಾಷಿಕರೇ ಸಿಕ್ಕರೆ ಇಲ್ಲಿನ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಸಾಧ್ಯ. ಜಿಲ್ಲೆಯ ಜನ ಪ್ರತಿಭಾವಂತರು IAS, IPS ಸುಲಭದಲ್ಲೇ ಪಾಸ್ ಮಾಡಬಹುದು , ಆದರೆ ಆಸಕ್ತಿ ಬೇಕಷ್ಟೆ.ತುಳು ಮಾತನಾಡುತ್ತಾರೆ ಅಂದಿರಿ, ನೀವೇನಾದರೂ ತುಳು ಭಾಷೆಯನ್ನು ಕಲಿಯುವ ಪ್ರಯತ್ನ ಮಾಡಿದ್ದೀರಾ?
ಕ್ಷಮಿಸಿ, ಅದೊಂದು ಸಾಧ್ಯವಾಗಿಲ್ಲ. ಕಾರಣ ಇಲ್ಲಿನ ಜನರ ಮಾತೃಭಾಷೆ ತುಳುವೇ ಅದರೂ ನನ್ನ ಜತೆ ವ್ಯವಹರಿಸುವ ಜನಸಾಮಾನ್ಯರೆಲ್ಲಾರೂ ಕನ್ನಡದಲ್ಲೆ ವ್ಯವಹರಿಸಿದ್ದರಿಂದ ತುಳು ಕಲಿಯುವ ಅವಕಾಶದಿಂದ ವಂಚಿತನಾಗಿದ್ದೇನೆ.ಮಂಗಳೂರಿನಲ್ಲಿ ನಿಮ್ಮ ಇಷ್ಟವಾದ ಆಹಾರ ಯಾವುದು?
ಉತ್ತರ ಹೇಳಲು ಒಂದು ಗಂಟೆ ಅವಧಿ ಕೊಟ್ಟರೆ ಖಂಡಿತಾ ಹೇಳುವೆ. ಅಮೇಝಿಂಗ್ . ನನ್ನ 36 ವರ್ಷದ ಜೀವನದಲ್ಲಿ ತಿನ್ನದೇ ಇರುವಂಹ ಆಹಾರ ಪದಾರ್ಥಗಳನ್ನು ನಾನಿಲ್ಲಿ ಸವಿದಿದ್ದೇನೆ. ಬಹುಶಃ ನಾನಿಲ್ಲಿನ ಆಹಾರ ಸವಿಯಲೆಂದೇ ಪದೇ ಪದೇ ಮಂಗಳೂರಿಗೆ ಬರುವ ಪ್ರಸಂಗ ಬರಬಹುದು( ನಗು)
ಆಡಳಿತಾವಧಿಯಲ್ಲಿ ನಿಮ್ಮ ಸಾಧನೆ ಏನು?
ನನ್ನ ಸಾಧನೆ ನಾನೇ ಹೇಳೋದು ಸರಿಯಲ್ಲ.ಜನ ಹೇಳಬೇಕು. ಆದರೆ ನನ್ನ ಪ್ರಕಾರ ಸಾಧನೆಗಳಿಗಿಂತ ಅದೆಲ್ಲವೂ ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಖುಷಿಯ ವಿಚಾರ ಎಂದರೆ STPS ಪ್ರೋಗ್ರೇಸ್ ನಮ್ಮದು ಶೇಕಡಾ 98 ರಷ್ಟು ಇದೆ.ಒಬ್ಬ ಅಧಿಕಾರಿಯಾಗಿ ಜನ ಸಾಮಾನ್ಯನ ಸ್ಪಂದಿಸಬೇಕು ಅಂದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ್ತು ಮಾದ್ಯಮದ ಜೊತೆ ಮುಕ್ತವಾಗಿ ಭಾಗವಹಿಸೋದು ಬಹುಮುಖ್ಯ.. ಆದರೆ ನಿಮಗೆ ಮಾದ್ಯಮ ಅಂದ್ರೆ ಅಷ್ಟಕಷ್ಟೇ ಯಾಕೆ ?
ಮಾಧ್ಯಮಗಳು ಸಂವಿಧಾನದ ನಾಲ್ಕನೇಯ ಅಂಗ ಎನ್ನುವುದನ್ನು ನಂಬಿ ಗೌರವಿಸುವವನು ನಾನು. ಆದರೆ ನನ್ನ ಸ್ವಭಾವ ಮಾಧ್ಯಮ ಸ್ನೇಹಿಯಾಗಿಲ್ಲ ಎನ್ನುವುದು ನನಗೆ ಚೆನ್ನಾಗಿಯೇ ಗೊತ್ತು. ಜತೆಗೆ ಒಬ್ಬ ಅಧಿಕಾರಿಗೆ ಮಾಧ್ಯಮದ ಮೂಲಕ ಪಬ್ಲಿಸಿಟಿ ಬೇಕಿಲ್ಲ. ಪ್ರಚಾರ ಬೇಕಾಗಿರುವುದು ರಾಜಕಾರಣಿಗಳಿಗೆ. ಅಧಿಕಾರಿಗಳು ಎಲೆಮರೆಯ ಕಾಯಿಗಳಂತೆ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಆದರೂ ಜಿಲ್ಲೆಯಲ್ಲಿ ಮಾಧ್ಯಮಗಳು ಕೊಟ್ಟಿರುವ ಸಹಕಾರಕ್ಕೆ ನಾನು ಅಭಾರಿ.
ಜಿಲ್ಲಾಧಿಕಾರಿಯಾಗಿ ನಿಮಗೆ ಯಾವತ್ತಾದರೂ ರಾಜಕಾರಣಿಗಳಿಂದ ಒತ್ತಡ ಬಂದಿದೆಯಾ?
ನೆವರ್, ನನ್ನ12 ವರ್ಷದ ಸೇವಾವಧಿಯಲ್ಲಿ ನನಗೆ ತೃಪ್ತಿ ಕೊಟ್ಟ ಜಿಲ್ಲೆ ದಕ್ಷಿಣ ಕನ್ನಡ. ಕಾರಣ ಇಲ್ಲಿನ ಜನಪ್ರತಿನಿಧಿಯಾಗಲಿ, ಇತರ ಗಣ್ಯ ಮುಖಂಡರಾಗಲಿ, ಕಾನೂನು ಬಾಹಿರ ಕೆಲಸಕ್ಕಾಗಿ ಯಾವತ್ತೂ ಯಾರಿಂದಲೂ ಒತ್ತಡ ಬಂದಿಲ್ಲ. ಸೋ ಇಲ್ಲಿ ಜನರು ಮತ್ತು ಜನಪ್ರತಿನಿಧಿಗಳು ವಂಡರ್ ಫುಲ್ನಿಮ್ಮ ಸರಳ ಸ್ವಭಾವದ ಗುಟ್ಟೇನು?
ಜನ ಹಾಗೆ ನನ್ನನ್ನು ಗುರುತಿಸುವುದಕ್ಕೆ, ನಾನು ಋಣಿ. ನನ್ನ ಸ್ನೇಹಿತರು ಹೆಚ್ಚಾಗಿ ಈ ಪ್ರಶ್ನೆ ನನ್ನನ್ನು ಕೇಳುತ್ತಿರುತ್ತಾರೆ. ಆದರೆ ಇದು ನನ್ನ ಹುಟ್ಟು ಗುಣ . IAS ಸಿಕ್ಕಿದೆ, ಡಿಸಿ ಹುದ್ದೆ ಸಿಕ್ಕಿದೆ ಎನ್ನುವುದನ್ನು ಯಾವತ್ತೂ ಪವರ್, ಅಧಿಕಾರ ಅಂತ ನೋಡಲೇಬಾರದು, ಅದು ನಮಗೆ ನೀಡಿದ ಜವಬ್ದಾರಿ ಎಂದು ತೆಗೆದುಕೊಂಡಾಗ ಅಲ್ಲಿ ತನ್ನಿಂತಾನೆ ಸರಳ, ವಿನಯ ವ್ಯಕ್ತಿತ್ವ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.ನಿಮ್ಮ ಫಿಟ್ನೆಸ್ ನ ಹಿಂದಿನ ರಹಸ್ಯ ?
ಮಾನಸಿಕ ಮತ್ತು ದೈಹಿಕ ಆರೋಗ್ಯ ಜತೆಯಾಗಿಯೇ ಹೋಗಬೇಕು. ಕಾಲೇಜು ದಿನಗಳಿಂದಲೇ ನಾನೊಬ್ಬ ಕ್ರೀಡಾ ವಿದ್ಯಾರ್ಥಿ, ಕ್ರಿಕೆಟ್, ಟೆನ್ನಿಸ್ ಪ್ಲೇಯರ್. ಮಂಗಳೂರಿನಲ್ಲಿ ನಾನು ಮುಂಜಾನೆ 5 ಗಂಟೆಗೆ ಎದ್ದು ಗಾಲ್ಫ್ ಆಡಲು ಹೋಗುತ್ತಿದ್ದೆ. ಮನೆಯಿಂದ ಒಮ್ಮೊಮ್ಮೆ ಒತ್ತಡ ಬಂದರೂ, ಒಂದು ದಿನವೂ ವಾಕಿಂಗ್ , ದೈಹಿಕ ವ್ಯಾಯಾಮವಿಲ್ಲದೆ, ನನ್ನ ದಿನ ಪ್ರಾರಂಭವಾಗೋದಿಲ್ಲ. ಇದೇ ನನ್ನ ಫಿಟ್ನೇಸ್ ಮಂತ್ರನೂತನ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಅವರ ಬಗ್ಗೆ ನಿಮಗೇನು ಗೊತ್ತು?
ಸೆಂಥಿಲ್ ನನ್ನ ಜೂನಿಯರ್ ಅನ್ನೊದಕ್ಕಿಂತಲೂ ನನ್ನ ಒಬ್ಬ ಉತ್ತಮ ಗೆಳೆಯ.ಜಿಲ್ಲೆಯಲ್ಲಿ ನನ್ನಕ್ಕಿಂತಲೂ ಉತ್ತಮ ಕೆಲಸ ಮಾಡುವ ಭರವಸೆ ನನಗಿದೆ. ಹಾಗೆಂದು ಅವರ್ ಮೇಲೆ ಒತ್ತಡ ಹಾಕುತ್ತಿಲ್ಲ .ಒಬ್ಬ ಯುವ ಉತ್ಸಾಹ ಹುಡುಗ ಹಾಗಾಗಿ ಜಿಲ್ಲೆಯಲ್ಲಿ ನನಗೆ ನೀಡಿದ ಪ್ರೀತಿ ಮತ್ತು ಪ್ರೋತ್ಸಾಹ ಅವರಿಗೂ ನೀಡಬೇಕೆಂದು ನನ್ನ ವಿನಂತಿ.