ಮಂಗಳೂರು,ಸೆ.06: ನಾಳೆ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ನಡೆಯಿತು. ನಗರದ ಕೇಂದ್ರ ಮೈದಾನದಿಂದ ಆರಂಭಗೊಂಡ ಪಥ ಸಂಚಲನ ನಗರದೆಲ್ಲೆಡೆ ಸಂಚರಿಸಿತು. ಪಥ ಸಂಚಲನದಲ್ಲಿ ಕೆ ಎಸ್ ಆರ್ ಪಿ, ಆರ್ ಎ ಎಫ್, ಸಿಎಆರ್ ಪ್ಲಟೂನ್, ಸಿವಿಲ್ ಪೊಲೀಸರು ಪಥಸಂಚಲನದಲ್ಲಿ ಪಾಲ್ಗೊಂಡರು.