ಮಂಗಳೂರು, ನ 11 (DaijiworldNews/MS): ಬಳಕೆದಾರರೊಬ್ಬರ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚನೆ ಎಸಗಿದ ಆರೋಪದಲ್ಲಿ ಮಂಗಳೂರು ಸೆನ್ ಪೊಲೀಸರು ಟಿಬಿಟಿಯನ್ ಪ್ರಜೆಗಳಿಬ್ಬರನ್ನು ನ.10ರಂದು ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರಕನ್ನಡ ಟಿಬೆಟಿಯನ್ ಕಾಲೊನಿಯ ಲಾಮಾ ಕ್ಯಾಂಪ್ ನಲ್ಲಿ ವಾಸವಿರುವ ಲೋಬಸಂಗ್ ಸಂಗ್ಯೆ (24) ಹಾಗ್ ದಕಪ ಪುಂದೇ (40) ಎಂದು ಗುರುತಿಸಲಾಗಿದೆ.
ಮಂಗಳೂರು ವೈದ್ಯನಾಥ ನಗರದ ನಿವಾಸಿಯಾದ ಸಿ.ಡಿ ಅಲೆಕ್ಸಾಂಡರ್ ಎಂಬವರು ಎಸ್ ಬಿ ಐ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್, ಕಳೆದ ಮೂರು ವರ್ಷದಿಂದ ಬಳಸುತ್ತಿದ್ದು, ಕಳೆದ ಮಾರ್ಚ್ 23ರಂದು ಬ್ಯಾಂಕ್ ಗೆ ಸೆರೆಂಡರ್ ಮಾಡಿದ್ದರು. ಆದರೆ ಮಾರ್ಚ್ 27ರಂದು ಅವರ ಖಾತೆಯಿಂದ ಯಾರೋ ಅಪರಿಚಿತರು 1,12,00 ರೂ. ಬೇರೆ ಬೇರೆ ಖಾತೆಗೆ ವರ್ಗಾಯಿಸಿರುವುದು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿ ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರಿಗೆ "ಮೊಬೈಲ್ ವಿಕಿ ವಾಲೆಟ್ ಆಪ್ "(MobiKwik wallet)ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಪೈನ್ಯಾನ್ಸ್ ಬ್ಯಾಂಕ್ ನಲ್ಲಿರುವ ಎರಡು ಖಾತೆಗಳಿಗೆ ಮತ್ತು ಆ ಬಳಿಕ ಇದು ಉತ್ತರಕನ್ನಡ ಟಿಬೆಟಿಯನ್ ಕಾಲೊನಿಯ ಲಾಮಾ ಕ್ಯಾಂಪ್ ನಲ್ಲಿ ವಾಸವಿರುವ ಲೋಬಸಂಗ್ ಸಂಗ್ಯೆಯ ಕೆನರಾ ಡಿಸಿಪಿ ಬ್ಯಾಂಕ್ ಗೆ ವರ್ಗಾವಣೆ ಯಾಗಿರುವುದು ಕಂಡುಬಂದಿತ್ತು.
ತನಿಖೆ ಮುಂದುವರಿಸಿದ ಪೊಲೀಸರಿಗೆ ಆರೋಪಿ ದಕಫಾ ಪುಂಡೆ ಚೀನಾದ ನಿಷೇಧಿತ ಆಪ್ ಗಳಾದ wechat ಮತ್ತು red pack ಮುಂತಾದದ ಆಪ್ ಗಳ ಮೂಲಕ ಹವಾಲ ರೀತಿಯಲ್ಲಿ ಹಣವನ್ನು ಮುಂಡಗೋಡಿನ ಸ್ಥಳೀಯ ಹಣಕಾಸಿನ ಬದಲಾವಣೆ ಏಜೆಂಟ್ ಮೂಲಕ ಮಾಡಿರುವುದು ಕಂಡುಬಂದಿತ್ತು.
ಈ ಹಿನ್ನಲೆಯಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿದ ಪೊಲೀಸರು ಮಗಳೂರಿನ 7ನೇ ಜೆ,ಎಂ.ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.