ಮಂಗಳೂರು,ಸೆ.06: ಎಲ್ಲರ ಚಿತ್ತ ಮಂಗಳೂರಿನತ್ತ ನೆಟ್ಟಿದೆ. ಬಿಜೆಪಿಯ ಯುವ ಮೋರ್ಚಾ ಕರೆ ನೀಡೀದ್ದ ಬೈಕ್ ರ್ಯಾಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಸದ್ಯ ಇದರ ಕೇಂದ್ರ ಬಿಂದುವಾಗಿದೆ, ಬೃಹತ್ ಪ್ರತಿಭಟನಾ ಸಮಾವೇಶ ಜರುಗಬೇಕಾಗಿದ್ದ ನಗರದ ನೆಹರೂ ಮೈದಾನದಲ್ಲಿ ಇಲ್ಲಿವರೆಗೆ ಯಾವುದೇ ರೀತಿಯ ಸಿದ್ಧತೆಗಳು ಕಂಡುಬಂದಿಲ್ಲ.
ಈ ನಡುವೆ ಏನೇ ಅಡ್ಡಿ ಆತಂಕಗಳನ್ನು ಒಡ್ಡಿದರೂ ಮಂಗಳೂರಿನಲ್ಲಿ ರ್ಯಾಲಿ ನಡೆಸುವುದು ಶತಸಿದ್ದ ಎಂದು ಬಿಜೆಪಿ ಯುವಮೋರ್ಚಾ ಹೇಳಿದೆ.ಸ್ಥಳೀಯ ಕಾರ್ಯಕರ್ತರನ್ನು ಸಹಿತ 20 ಸಾವಿರಕ್ಕೂ ಹೆಚ್ಚು ಮಂದಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘಟನೆ ತಿಳಿಸಿದೆ.