ಮಂಗಳೂರು,ಸೆ.06: ದೇಶದಲ್ಲಿ ವಿಚಾರವಾದಿಗಳು, ಬುದ್ಧಿ ಜೀವಿಗಳನ್ನು ಗುರಿಯಾಗಿಸಿ ಹತ್ಯೆ ನಡೆಸಲಾಗುತ್ತಿದೆ. ಇಂತಹ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಸರಕಾರ ಮಾಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆಯನ್ನುದ್ದೇಶಿಸಿ ಹೇಳಿದರು.
ಇನ್ನೂ ಪ್ರಗತಿಪರರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ವಿಚಾರವಾದಿಗಳು, ಬುದ್ಧಿ ಜೀವಿಗಳನ್ನು ಗುರಿಯಾಗಿಸಿ ಹತ್ಯೆಗೈಯ್ಯಲಾಗುತ್ತಿದೆ ಇಂತಹ ಸಂಸ್ಕೃತಿ ಕೊನೆಗೊಳ್ಳಬೇಕು. ಓರ್ವ ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಗಾರ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಖಂಡನೀಯ ಎಂದು ಲೇಖಕಿ ಚಂದ್ರಕಲಾ ನಂದಾವರ ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ವಸಂತ ಆಚಾರಿ,ಸುನೀಲ್ ಕುಮಾರ್ ಬಜಾಲ್, ಹಿರಿಯ ನ್ಯಾಯವಾದಿ ದಯಾನಾಥ ಕೋಟ್ಯಾನ್, ಕೋಮು ಸೌಹಾರ್ದ ವೇದಿಕೆಯ ಸುರೇಶ್ ಭಟ್ ಬಾಕ್ರಬೈಲು , ಜೆಎಂಎಸ್ ನ ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ್,ಪ್ರಗತಿ ಪರರಾದ ಚಂದ್ರಹಾಸ ಉಳ್ಳಾಲ ಮತ್ತಿತ್ತರು ಉಪಸ್ಥಿತರಿದ್ದರು.