ಮಂಗಳೂರು: ಬಿಜೆಪಿ ಇಂದು ನಗರದಲ್ಲಿ ಆಯೋಜಿಸಲು ಉದ್ದೇಶಿಸಲಿರುವ `ಮಂಗಳೂರು ಚಲೋ' ರ್ಯಾಲಿಯಲ್ಲಿ ಭಾಗವಹಿಸಲು ಪಕ್ಷದ ನಾಯಕರು ನಗರಕ್ಕೆ ಆಗಮಿಸುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು 2000ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬುಧವಾರದಂದು ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಹಾಗೂ ಇತರ ಕಡೆಗಳಿಂದ ಆಗಮಿಸಿದ ಬೈಕ್ ರ್ಯಾಲಿಯನ್ನು ಮಂಗಳೂರು ಪ್ರವೇಶಿಸದಂತೆ ಪೊಲೀಸರು ತಡೆದರು.
ಮಂಗಳೂರು ನಗರ ಪ್ರವೇಶಿಸುವ ಎಲ್ಲಾ ರಸ್ತೆಗಳು ಹಾಗೂ ನಗರದ ಒಳರಸ್ತೆಗಳಲ್ಲೂ ಬ್ಯಾರಿಕೇಡ್ಗಳನ್ನು ಇಡುವ ಮೂಲಕ ಪೊಲೀಸರು ಯಾವುದೇ ಕಾರಣಕ್ಕೂ ಜಾಥಾ ಮಂಗಳೂರು ಪ್ರವೇಶಿದಂತೆ ಕ್ರಮವಹಿಸಿದ್ದಾರೆ.
ಮತ್ತೊಂದೆಡೆ ಸರಕಾರ ಹಾಗೂ ಪೊಲೀಸರು ಏನೇ ಮಾಡಿದರೂ ಈ ರ್ಯಾಲಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬೈಕ್ ಜಾಥಾ ನಡೆದೇ ನಡೆಯುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಬುಧವಾರಂದು ಪೊಲೀಸರು ಪ್ರಮುಖ ಬಿಜೆಪಿ ನಾಯಕರಾದಂಥಾ ಸಂಸದ ಹಾಗೂ ಬಿಜೆಪಿ ಯುವಮೋಚರ್ಾದ ರಾಜ್ಯಾಧ್ಯಕ್ಷ ಪ್ರತಾಪ್ಸಿಂಹಾ, ಮಾಜಿ ಸಚಿವ ಎಸ್ಎ ರಾಮ್ದಾಸ್, ವಿರೋಧ ಪಕ್ಷಗದ ನಾಯಕ ಎಸ್ ಈಶ್ವರಪ್ಪ, ಶಾಸಕ ಬಿವೈ ರಾಘವೇಂದ್ರ, ಮಾಜಿ ಸಚಿವ ಮತ್ತು ಶಾಸಕ ಸಿಟಿ ರವಿ ಹಾಗೂ ಮಂಗಳೂರು ಪ್ರವೇಶಿಸಲು ಪ್ರಯತ್ನಿಸಿದ 2000ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದರು.
ಈ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದಶರ್ಿ ಅರವಿಂದ್ ನಿಂಬಾವಳಿ, ಬಿಜೆಪಿ ಯುವಮೋಚರ್ಾ ಮಂಗಳೂರಿನಲ್ಲಿ ನಡೆಯಲಿರುವ ಜಾಥಾಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿತ್ತೇ ಹೊರತು ಅನುಮತಿ ನೀಡುವಂತೆ ಅಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ಮಂಗಳೂರಿನ ಜ್ಯೋತಿ ವೃತ್ತದಿಂದ ನಡೆಯಲಿರುವ ಪಾದಯಾತ್ರೆ ಮತ್ತು ಬೈಕ್ ರ್ಯಾಲಿಯನ್ನು ನಡೆಸಿಯೇ ಸಿದ್ಧ ಎಂದು ಹೇಳಿರುವ ನಿಂಬಾವಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸುವುದರ ಜೊತೆಗೆ ಪಕ್ಷದ ಕಾರ್ಯಕರ್ತರು ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆಯನ್ನೂ ಹಾಕಲಿರುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿಎಸ್ ಯಡ್ಯೂರಪ್ಪ ಸರಕಾರದ ವಿರುದ್ಧ ನಡೆಯಲಿರುವ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಘೋಷಣೆಯನ್ನು ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಮಧ್ಯೆ ಪೊಲೀಸರು ಬೈಕ್ ರ್ಯಾಲಿ ಮತ್ತು ಪಾದಯಾತ್ರೆಯನ್ನು ತಡೆಯಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು ನಗರಾದ್ಯಂತ ಕಟ್ಟುನಿಟ್ಟಿನ ಭದ್ರತೆಯನ್ನು ಏರ್ಪಡಿಸಿದ್ದಾರೆ.
ಬಿಜೆಪಿ ಮುಖಂಡರಾದ ಬಿಎಸ್ ಯಡ್ಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಈಗಾಗಲೇ ನಗರಲ್ಲಿ ಆಗಮಿಸಿದ್ದು ಇನ್ನೂ ಹಲವು ನಾಯಕರು ಆಗಮಿಸುವ ನಿರೀಕ್ಷೆಯಿದೆ.