ಬೆಂಗಳೂರು: ದುಷ್ಕಮರ್ಿಗಳ ಗುಂಡಿಗೆ ಬಲಿಯಾದ ಪತ್ರಕತರ್ೆ ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಗುಪ್ತಚರ ಐಜಿಪಿ ಬಿಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ಸದ್ಯ ಸಾಕ್ಷಿಗಾಗಿ ಆಕೆಯ ಮನೆಯ ಹೊರಗೆ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ.
ಆದರೆ ಈ ಸಿಸಿ ಕ್ಯಾಮೆರಾವನ್ನು ಗೌರಿ ಲಂಕೇಶ್ ಕೇವಲ ಹದಿನೈದು ದಿನಗಳ ಹಿಂದಷ್ಟೇ ಅಳವಡಿಸಿದ್ದರು ಎಂಬ ಅಂಶ ಆಕೆಯ ತಾಯಿಯಿಂದ ತಿಳಿದುಬಂದಿದ್ದು ಆಕೆಗೆ ಜೀವಬೆದರಿಕೆಯಿತ್ತು ಎಂಬುದರತ್ತ
ಗೌರಿ ಲಂಕೇಶ್ ತಾಯಿ ಇಂದ್ರಮ್ಮ ಹೇಳುವಂತೆ ಹದಿನೈದು ದಿನಗಳ ಹಿಂದೆ ಗೌರಿ ಲಂಕೇಶ್ ತನ್ನನ್ನು ಇಬ್ಬರು ಬೈಕ್ನಲ್ಲಿ ಗಾಂಧಿ ಬಜಾರ್ನಿಂದ ರಾಜರಾಜೇಶ್ವರಿ ನಗರದ ತನ್ನ ಮನೆಯವರೆಗೆ ಹಿಂಬಾಲಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದರು. ಆನಂತರ ಆಕೆ ತನ್ನ ಮನೆಯ ಪ್ರವೇಶ ದ್ವಾರದ ಬಳಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು.
31 ಸದಸ್ಯರಿರುವ ವಿಶೇಷ ತನಿಖಾ ತಂಡ ಈಗಾಗಲೇ ಮಂಗಳವಾರ ರಾತ್ರಿಯಿಂದ ಹತ್ಯೆ ನಡೆದ ಸಮಯದವರೆಗಿನ ಎಲ್ಲಾ ವಿವರಗಳನ್ನೂ ಕಲೆಹಾಕಿದ್ದಾರೆ. ಆದರೆ ಗೌರಿ ಲಂಕೇಶ್ ಮನೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ದೃಶ್ಯಾವಳಿಗಳು ಈ ಪ್ರಕರಣದಲ್ಲಿ ಪ್ರಮುಖವಾಗಲಿದೆ.
ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯಗಳು ಕತ್ತಲೆಯ ಕಾರಣದಿಂದ ಮಬ್ಬುಮಬ್ಬಾಗಿದ್ದರೂ ಒರ್ವ ದುಷ್ಕಮರ್ಿ ಗೌರಿ ಲಂಕೇಶ್ಗೆ ಗುಂಡಿಕ್ಕುವ ದೃಶ್ಯ ಕಂಡುಬಂದಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಗೆ ಜೀವಭಯ ಇರುವ ಬಗ್ಗೆ ಗೌರಿ ಲಂಕೇಶ್ ಆಗಲೀ ಅಥವಾ ಆಕೆಯ ತಾಯಿಯಾಗಲೀ ನಮಗೆ ತಿಳಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಲಂಕೇಶ್ ಪತ್ರಿಕೆಯ ಮಾಲಕಿ ಮಂಗಳವಾರದಂದು ಗೃಹಸಚಿವ ರಾಮಲಿಂಗ ರೆಡ್ಡಿಯನ್ನು ಭೇಟಿ ಮಾಡಲು ಸಮಯ ನಿಗದಿ ಮಾಡಿದ್ದರು ಆದರೆ ಕಾರಣಂತರದಿಂದ ಆಕೆ ಸಚಿವರನ್ನು ಭೇಟಿಯಾಗಿರಲಿಲ್ಲ. ಸದ್ಯ ಆಕೆ ತನಗೆ ಜೀವಭಯಯಿರುವ ಬಗ್ಗೆ ಮತ್ತು ಸೂಕ್ತ ಭದ್ರತೆ ಒದಗಿಸುವಂತೆ ಗೃಹಮಂತ್ರಿಯಲ್ಲಿ ಮನವಿ ಮಾಡಲು ಬಯಸಿರಬಹುದು ಎಂದು ಶಂಕಿಸಲಾಗುತ್ತಿದೆ.