ಮುಂಬೈ: ಇಲ್ಲಿನ ಜುಹು ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದರೆ ಇತರ ಹದಿನೈದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರೀನ್ ಎಕ್ರೇಸ್ ಸಮೀಪವಿರುವ ಕೈಫಿ ಆಝ್ಮಿ ಉದ್ಯಾನವನದ ಪಕ್ಕದ ಪ್ರಾರ್ಥನಾ ಕಟ್ಟಡದಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟವೇ ಈ ಅಗ್ನಿದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಮುಂಬೈ ಅಗ್ನಿಶಾಮಕದಳ ಹಾಗೂ ಮುಂಬೈ ಪೊಲೀಸರ ಪ್ರಕಾರ ಘಟನೆಯಲ್ಲಿ ಮೃತರಾದವರ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಗುರುತು ಹಿಡಿಯಲಸಾಧ್ಯವಾಗಿದೆ.
ರಾತ್ರಿ 10ರಿಂದ 11.30ರ ಮಧ್ಯೆ ನಡೆದ ಈ ಅಗ್ನಿ ಅನಾಹುತ ನಡೆದಿದ್ದು ಅದನ್ನು ನಂದಿಸುವ ಹೊತ್ತಿಗೆ ಮಧ್ಯರಾತ್ರಿ ಕಳೆದಿತ್ತು ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರು ಕಟ್ಟಡ ಕಾಮರ್ಿಕರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗಾಯಾಳುಗಳನ್ನು ಆರ್ಎನ್ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿದುಬಂದಿದೆ.