ಮಂಗಳೂರು, ಸೆ.೭: ಹಿಂದು ಕಾರ್ಯಕರ್ತರ ಮೇಲೆ ನಿರಂತರ ನಡೆಯುತ್ತಿರುವ ಕಗ್ಗೊಲೆಯನ್ನು ಖಂಡಿಸಿ ನಗರದಲ್ಲಿ ತಡೆಯ ನಡುವೆಯೂ ಪೋಲೀಸ್ ಸರ್ಪಗಾವಲಿನಲ್ಲಿ ಮಂಗಳೂರು ಚಲೋ ನಡೆಯುತ್ತಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ಎಸ್ ಯಡಿಯೂರಪ್ಪ, ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಆರ್ ಅಶೋಕ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ನಾಯಕರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಮಂಗಳೂರು ಚಲೋ ಪ್ರತಿಟನೆಯನ್ನು ಉದ್ದೇಶಿಸಿ ಮಾತನಾಡಿದ ನಾಯಕರು ರಾಜ್ಯ ಸರ್ಕಾರ ಮತ್ತು ಸಚಿವ ರಮಾನಾಥ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೀದಿ ಬೀದಿಗಳಲ್ಲಿ ಹತ್ಯೆ ನಡೆಯುತ್ತಿದ್ದರೂ ಎದ್ದೇಳುತ್ತಿಲ್ಲ, ಎದ್ದೇಳು ಸಿದ್ದರಾಮಯ್ಯ ಎದ್ದೇಳು ಅನ್ನುವ ಘೋಷಣೆಯೊಂದಿಗೆ ರಾಜ್ಯ ಸರ್ಕಾರಕ್ಕೆ ಲೇವಡಿ ಮಾಡುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದೆ.