ನವದೆಹಲಿ, ಸೆ.07: ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾಗಿ ಗುರುವಾರ ಅಧಿಕಾರ ಸ್ವೀಕರಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಭಾನುವಾರದಂದು ನಡೆದ ಪ್ರಧಾನಿ ಮೋದಿ ಸಂಪುಟ ಪುನರ್ರಚನೆಯ ವೇಳೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಪುಟ ಸಚಿವೆ ಸ್ಥಾನಕ್ಕೆ ಪದೋನ್ನತಿಗೊಳಿಸಲಾಗಿತ್ತು.
ಆದರೆ ಹೆಚ್ಚುವರಿ ರಕ್ಷಣಾ ಸಚಿವರಾಗಿದ್ದ ಅರುಣ್ ಜೇಟ್ಲಿ ಜಪಾನ್ ಪ್ರವಾಸದಲ್ಲಿದ್ದ ಕಾರಣ ಸೀತಾರಾಮನ್ ಅಂದು ಅಧಿಕಾರ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.
ಈ ಹಿಂದೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು 1975ರ ಡಿಸೆಂಬರ್ 1ರಿಂದ ಡಿಸೆಂಬರ್ 21 ಮತ್ತು 1980ರಲ್ಲಿ ಜನವರಿ 14ರಿಂದ 1982 ಜನವರಿ 15ರವರೆಗೆ ದೇಶದ ರಕ್ಷಣಾ ಕಮಾನನ್ನು ಹಿಡಿದುಕೊಂಡಿದ್ದರು.
ನಿರ್ಮಲಾ ಸೀತಾರಾಮನ್ ಮೂಲಕ ಸದ್ಯ ಸುದೀರ್ಘ ಅವಧಿಯ ನಂತರ ಮತ್ತೊರ್ವ ಮಹಿಳೆ ದೇಶದ ಭದ್ರತೆಯ ಚುಕ್ಕಾಣಿ ಹಿಡಿದಂತಾಗಿದೆ.