ಭುವನೇಶ್ವರ, ಸೆ.07: ಒರಿಸ್ಸಾ ವಿಧಾನಸಭೆ ಚುನಾವಣೆಯಲಿ ಬಿಜೆಪಿಯು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಗುರುವಾರ ತಿಳಿಸಿದ್ದಾರೆ.
ಮುಂಬರಲಿರುವ ಒರಿಸ್ಸಾ ಚುನಾವಣೆಯ ಅಂಗವಾಗಿ ಮಿಶನ್ 120ಯನ್ನು ಅನಾವರಣಗೊಳಿಸಿದ ಶಾ ರಾಜ್ಯದಲ್ಲಿ ಪಕ್ಷವು ಮೂರನೇ ಎರಡು ಬಹುಮತದಿಂದ ಸರಕಾರ ರಚಿಸಲಿರುವುದು ಎಂದು ಭವಿಷ್ಯ ನುಡಿದರು.
ಈ ವೇಳೆ ಸುದ್ದಿ ಪತ್ರಿಕೆಯೊಂದು ನೀಡಿದ ಅತ್ಯುತ್ತಮ ಆಡಳಿತಗಾರ ಪ್ರಶಸ್ತಿ ಪಡೆದು ಬೀಗುತ್ತಿರುವುದರ ವಿರುದ್ಧ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಟೀಕಿಸಿದರು.
ನಂತರ ಶಾ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧಮೇಂದ್ರ ಪ್ರಧಾನ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಸಂತ್ ಪಾಂಡ ಜೊತೆ 11ನೇ ಶತಮಾನದ ಲಿಂಗರಾಜ್ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪಾಕ್ ನೆಲದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಮೋದಿ ಸರಕಾರ ದಿಟ್ಟ ರಾಜಕೀಯ ಮನೋಸ್ಥೈರ್ಯವನ್ನು ಬಿಂಬಿಸುತ್ತದೆ. ದೇಶವನ್ನು ರಕ್ಷಿಸಲು ಮೋದಿ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಇದೇ ವೇಳೆ ಅಮಿತ್ ಶಾ ತಿಳಿಸಿದರು.