ಕೊಯಮತ್ತೂರು, ಸೆ.07: ಇಲ್ಲಿನ ಸೋಮನೂರು ಎಂಬಲ್ಲಿ ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟ ದಾರುಣ ಘಟನೆ ಗುರುವಾರ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಗುರುವಾರ ಮಧ್ಯಾಹ್ನ ಸುಮಾರು ಐವತ್ತು ಅಡಿ ವಿಸ್ತಾರದ ಬಸ್ ನಿಲ್ದಾಣದಲ್ಲಿ ಹಲವು ಮಂದಿ ಬಸ್ಗಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ ನಿಲ್ದಾಣದ ಮೇಲ್ಛಾವಣಿ ಏಕಾಎಕಿ ಕುಸಿದುಬಿದ್ದ ಪರಿಣಾಮ ಅವರೆಲ್ಲಾ ಅದರಡಿ ಸಿಲುಕಿಕೊಂಡರು.
ಅವಶೇಷಗಳಡಿಯಿಂದ ಬದುಕುಳಿದಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂಬ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳನ್ನು ಕೊಯಮತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ.