ಮಂಗಳೂರು, ಸೆ.07: ಬಿಜೆಪಿ ನೇತೃತ್ವದಲ್ಲಿ ಇಂದು ನಡೆದ ಮಂಗಳೂರು ಚಲೋ ಕಾರ್ಯಕ್ರಮದ ವೇಳೆ ಗಾಯಗೊಂಡ ಪ್ರತಿಭಟಕಾರನೊಬ್ಬನನ್ನು ದೈಜಿವಲ್ರ್ಡ್ ವಾಹಿನಿಯ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಮಂಗಳೂರು ಚಲೋ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ದಾಟಿ ನುಗ್ಗಿದಾಗ ಕಿತ್ತಾಟ ನಡೆದು ಈ ವೇಳೆ ಒರ್ವ ವ್ಯಕ್ತಿಯ ತಲೆಗೆ ಏಟುಬಿದ್ದು ಗಂಭೀರವಾಗಿ ಗಾಯಗೊಂಡರು.
ಪೊಲೀಸರು ತಕ್ಷಣ ಆತನ ಸಹಾಯಕ್ಕೆ ಧಾವಿಸಿದರು ನಂತರ ಅಲ್ಲೇ ಘಟನಾವಳಿಗಳನ್ನು ಸೆರೆಹಿಡಿಯುತ್ತಿದ್ದ ದೈಜಿವಲ್ರ್ಡ್ ವಾಹಿನಿಯ ಉದ್ಯೋಗಿಗಳು ಆತನನ್ನು ವಾಹಿನಿಯ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.