ಬೆಂಗಳೂರು ನ 2: ಬಿಜೆಪಿಯವರು 'ಪರಿವರ್ತನಾ ರ್ಯಾಲಿ' ಎನ್ನುವ ನಾಟಕ ಪ್ರಾರಂಭ ಮಾಡಿದ್ದಾರೆ . ಆದರೆ ಇದು ಪರಿವರ್ತನಾ ರ್ಯಾಲಿಗಿಂತ ಪಶ್ಚಾತ್ತಾಪದ ರ್ಯಾಲಿಯಾಗಿದೆ. ಕಾರಣ ಅವರು ಮಾಡಿದ ಪಾಪವನ್ನು ತೊಳೆದುಕೊಳ್ಳುವ ಕೆಲಸ ಆಗಬೇಕಾಗಿದೆ. ಇದಕ್ಕಾಗಿ ಪರಿವರ್ತನಾ ರ್ಯಾಲಿ ಹೆಸರಲ್ಲಿ ಪಶ್ಚಾತಾಪ ಮಾಡುತ್ತಿದ್ದಾರೆಬ್ನ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗಿನ ಮಹತ್ವದ ಸಭೆ ಬಳಿಕ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು,ಹಿಂದುತ್ವದ ಹೆಸರಲ್ಲಿ ಬಿಜೆಪಿ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಸಮಾಜದಲ್ಲಿ ನೆಮ್ಮದಿ, ಶಾಂತಿ ಕೆಡಿಸುತ್ತಿದ್ದಾರೆ. ಮೊದಲು ಅವರ ಪರಿವರ್ತನೆ ಆಗಬೇಕು ಹೀಗಾಗಿ ರ್ಯಾಲಿ ಮೂಲಕ ತಮ್ಮ ಪಾಪಗಳಿಗೆ ತಕ್ಕ ಪ್ರಾಯಶ್ಚಿತ ಮಾಡಿಕೊಳ್ಳಲು ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಮಿತ್ ಶಾ, ಯಡಿಯೂರಪ್ಪ, ಬಳ್ಳಾರಿ ರೆಡ್ಡಿ ಹೀಗೆ ಬಿಜೆಪಿಯಲ್ಲಿ ಸಾಲು ಸಾಲಾಗಿ ಎಲ್ಲರೂ ಜೈಲಿಗೆ ಹೋದವರೇ.. ಅವರ ನೋಟ್ ಬ್ಯಾನ್, ಜಿಎಸ್ಟಿ ಗೊಂದಲ,ಬ್ಲೂ ಫಿಲ್ಮ್ ನೋಡಿ ಅಧಿಕಾರ ಕಳೆದುಕೊಂಡದ್ದು, ಅತ್ಯಾಚಾರ ಮಾಡಿ ಜೈಲಿಗೆ ಹೋಗಿದ್ದು ಹೀಗೆ ಬಿಜೆಪಿ ಪಕ್ಷದ ಅವಾಂತಗಳು ಒಂದೇ ಎರಡೇ . ಹೀಗಾಗಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.