ನವದೆಹಲಿ, ಸೆ.08: ಭಾರತಕ್ಕೆ ಆಗಮಿಸುವ ಮುನ್ನ ನಿಮ್ಮ ದೇಶದಲ್ಲೇ ಬೀಫ್ ಸೇವಿಸಿ ಬನ್ನಿ ಎಂದು ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಹೊಸದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೆಜೆ ಅಲ್ಫೊನ್ಸ್ ತಿಳಿಸಿದರು.
ಭಾರತದ ಕೆಲವು ರಾಜ್ಯಗಳಲ್ಲಿ ಗೋಮಾಂಸ ಸೇವನೆ ನಿಷೇಧಯಿರುವ ಕಾರಣ ಅದು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಲ್ಫೊನ್ಸ್ “ಪ್ರವಾಸಿಗರು ತಮ್ಮ ದೇಶದಲ್ಲಿ ಬೀಫ್ ಸೇವಿಸಿದ ನಂತರ ಭಾರತಕ್ಕೆ ಆಗಮಿಸಬಹುದು” ಎಂದು ಉತ್ತರಿಸಿದರು.
ನೂತನ ಸಚಿವರು ಭುವನೇಶ್ವರದಲ್ಲಿ ನಡೆದ ಭಾರತೀಯ ಪ್ರವಾಸೋದ್ಯಮಿಗಳ ಸಂಘ ಆಯೀಜಿಸಿದ್ದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ನರೇಂದ್ರ ಮೋದಿ ಸರಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ನೇಮಕಗೊಂಡಿರುವ ಕೇರಳ ಮೂಲದ ಅಲ್ಫೊನ್ಸ್ ಸೋಮವಾರದಂದು ಮಾಧ್ಯಮದ ಜೊತೆ ಮಾತನಾಡುತ್ತಾ ಬಿಜೆಪಿ ಯಾವುದೇ ರಾಜ್ಯದಲ್ಲಿ ಆಹಾರ ನೀತಿಯನ್ನು ಹೇರುವುದಿಲ್ಲ ಎಂದು ತಿಳಿಸಿದ್ದರು.