ಮಂಗಳೂರು,ಸೆ.08: ವಾಮಂಜೂರಿನ ಸಂತ ಜೋಸೆಫ್- ದಿ ವರ್ಕರ್ ಚರ್ಚ್ ನಲ್ಲಿ ಮಾತೆ ಮರಿಯಮ್ಮರ ಜನ್ಮ ದಿನವಾದ ತೆನೆ ಹಬ್ಬವನ್ನು ಕ್ರೈಸ್ಥ ಬಾಂಧವರು ವಿಜೃಂಭಣೆಯಿಂದ ಆಚರಿಸಿದರು. ಚರ್ಚ್ ನ ಧರ್ಮ ಗುರುಗಳಾದ ಫಾದರ್ ಸಿಪ್ರಿಯಾನ್ ಪಿಂಟೋ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಬಳಿಕ ಮೇರಿ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಎಳೆಯ ಭತ್ತದ ತೆನೆಗಳನ್ನು ಆಶೀರ್ವದಿಸಿ ಪ್ರತಿ ಕುಟುಂಬಗಳಿಗೆ ಹಂಚಲಾಯಿತು. ಬಳಿಕ ಭಕ್ತರಿಗೆ ಕಬ್ಬು ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು. ಬಳಿಕ ಚರ್ಚ್ ನ ಸಹಾಯಕ ಧರ್ಮಗುರುಗಳಾದ ಫಾದರ್ ಜೇಸನ್ ಮೊಂತೆರೋ ನಾಡಿನ ಸಮಸ್ತ ಜನರಿಗೆ ಮೋಂತಿ ಹಬ್ಬದ ಶುಭಾಶಯವನ್ನು ತಿಳಿಸಿದರು.