ನ್ಯೂಯಾರ್ಕ್: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಚೀನಾದ ಶ್ವೈ ಪೆಂಗ್ ಜೋಡಿ ಹಂಗೇರಿಯ ಟೈಮಿ ಬಾಬೊಸ್ ಮತ್ತು ಝಕ್ ಗಣರಾಜ್ಯದ ಆಂಡ್ರಿಯಾ ಲವಕ್ಕೊವಾ ಜೋಡಿಯನ್ನು ನೇರ ಸೆಟ್ ಗಳಲ್ಲಿ ಮಣಿಸುವ ಮೂಲಕ ಯುಎಸ್ ಓಪನ್ ಸೆಮಿಫೈನಲ್ ತಲುಪಿದೆ.
ಮೈದಾನದಲ್ಲಿ ಒಂದು ಗಂಟೆ 56 ನಿಮಿಷಗಳ ಕಾಲ ಹೋರಾಡಿದ ನಾಲ್ಕನೇ ಶ್ರೇಯಾಂಕಿತ ಭಾರತ-ಚೀನಾ ಜೋಡಿ ಐದನೇ ಕ್ರಮಾಂಕಿತ ಪ್ರತಿಸ್ಪರ್ಧಿಗಳನ್ನು 7-6, 6-4ರ ನೇರ ಸೆಟ್ ಗಳಲ್ಲಿ ಮಣಿಸಿ ಈ ಸಾಧನೆ ಮಾಡಿತು.
ತೈಪೈಯ ಎಚ್ ಎ ಚಾನ್ ಮತ್ತು ಚೀನಾದ ಎಸ್ ಝಾಂಗ್ ಹಾಗೂ ತೈಪೈ-ಸ್ವಿಝರ್ಲ್ಯಾಂಡ್ ಜೋಡಿ ವೈ ಚಾನ್ ಮತ್ತು ಮಾರ್ಟಿನ್ ಹಿಂಗೀಸ್ ಮಧ್ಯೆ ನಡೆಯಲಿರುವ ಕ್ವಾರ್ಟರ್ ಫೈನಲ್ ನಲ್ಲಿ ವಿಜಯಿಯಾಗುವ ಜೋಡಿಯ ಜೊತೆ ಸಾನಿಯಾ-ಪೆಂಗ್ ಸೆಮೀಸ್ ನಲ್ಲಿ ಮುಖಾಮುಖಿಯಾಗಲಿದ್ದಾರೆ.