ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ದುಷ್ಕರ್ಮಿಗಳು ಶೂಟ್ ಮಾಡುವ ದೃಶ್ಯಾವಳಿಗಳು ಅವರ ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ಇದೀಗ ಈ ವಿಡಿಯೊ ಫುಟೇಜನ್ನು ಬಿಡುಗಡೆಗೊಳಿಸಿದ್ದಾರೆ.
ವಿಡಿಯೊ ತುಣುಕಿನಲ್ಲಿ ಗೌರಿ ಲಂಕೇಶ್ ಮನೆಯ ಬಳಿ ಮೊದಲೇ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಆಕೆಗಾಗಿ ಕಾದುಕುಳಿತಿದ್ದ ದುಷ್ಕರ್ಮಿಗಳು ಲಂಕೇಶ್ ತಮ್ಮ ಕಾರಿನಿಂದ ಇಳಿದು ಮನೆಯ ಗೇಟ್ ತೆರೆಯುತ್ತಿದ್ದಂತೆ ಆಕೆಯ ಮೇಲೆ ಹಿಂದಿನಿಂದ ದಾಳಿ ಮಾಡಿದ ದುಷ್ಕರ್ಮಿ ಆಕೆಯ ಮೇಲೆ ಗುಂಡಿನ ಮಳೆಗರೆದು ತಕ್ಷಣ ಪರಾರಿಯಾಗಿರುವುದು ಕಂಡುಬಂದಿದೆ.
ಕತ್ತಲೆ ಆವರಿಸಿದ್ದ ಪರಿಣಾಮ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಕೊಲೆಗಾರರ ಮುಖ ಸ್ಪಷ್ಟವಾಗಿ ಗೋಚರಿಸದಿದ್ದರೂ ಕೂಲಂಕುಷವಾಗಿ ಪರೀಕ್ಷಿಸಿದರೆ ಅವರ ಸುಳಿವು ಲಭ್ಯವಾಗಬಹುದು ಎಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿದ್ದ ಗೌರಿ ಲಂಕೇಶ್ ತಮ್ಮ ಕಠಿಣ ಎಡಪಂಥೀಯ ನಿಲುವನ್ನು ಹೊಂದಿದ್ದರು. ಕಳೆದ ಮಂಗಳವಾರ ಅವರನ್ನು ದುಷ್ಕರ್ಮಿಗಳು ಅವರ ಮನೆಯ ಮುಂದೆಯೇ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಸದ್ಯ ಪ್ರಕರಣವನ್ನು ವಿಶೇಷ ತನಿಖಾ ತಂಡ ನಡೆಸುತ್ತಿದ್ದು ಕೊಲೆಗಾರರಿಗಾಗಿ ವ್ಯಾಪಕ ಶೋಧಕಾರ್ಯ ಮುಂದುವರಿದಿದೆ. ಈ ಹಿಂದೆ ವಿಚಾರವಾದಿಗಳಾದ ದಾಬೋಲ್ಕರ್, ಪನ್ಸರೆ, ಕಲಬುರ್ಗಿ ಮುಂತಾದವರನ್ನು ಕೂಡಾ ಇದೇ ಮಾದರಿಯಲ್ಲಿ ಹತ್ಯೆ ಮಾಡಲಾಗಿದ್ದು