ಚೀನದ ವಿರುದ್ಧ ಇಲ್ಲಿಯವರೆಗೆ ಮತ್ತು ಈಗಲೂ ಎದೆ ಸೆಟೆದು ನಿಂತಿರುವ ವಿಶ್ವದ ಏಕೈಕ ಅಗ್ರ ರಾಜಕೀಯ ಮುತ್ಸದ್ದಿಯಾಗಿ ಪ್ರಧಾನಿ ನರೇಂದ್ರ ಮೋದಿ ಎಂದು ಉನ್ನತ ಅಮೆರಿಕನ್ ತಜ್ಞರೊಬ್ಬರು ಹೇಳಿದ್ದಾರೆ.
'ಚೀನದ ಬೆಲ್ಟ್ ಆ್ಯಂಡ್ ರೋಡ್ ಮಹತ್ವಾಕಾಂಕ್ಷೀ, ವಿವಾದಾತ್ಮಕ ಯೋಜನೆಯ ವಿರುದ್ಧ ಎದೆ ಸೆಟೆದು ನಿಂತ ವಿಶ್ವದ ಏಕೈಕ ರಾಜಕೀಯ ಮುತ್ಸದ್ದಿ ಎಂದರೆ ಪ್ರಧಾನಿ ನರೇಂದ್ರ ಮೋದಿ'. ಚೀನ ಮತ್ತು ಅದರ ಬೆಲ್ಟ್ ಆ್ಯಂಡ್ ರೋಡ್ ಎಂಬ ಗೊಂದಲಕಾರಿ ಯೋಜನೆಯ ವಿರುದ್ಧ ಅಮೆರಿಕ ಕೂಡ ಪ್ರಾರಂಭದಲ್ಲಿ ಮೌನ ವಹಿಸಿತ್ತು. ಈಚೆಗಷ್ಟೇ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದೆ ಎಂದು ಚೀನ ವಿರುದ್ಧದ ತಂತ್ರಗಾರಿಕೆ ಕುರಿತಾದ ಕೇಂದ್ರವೊಂದರ ನಿರ್ದೇಶಕರಾಗಿರುವ ಮೈಕೆಲ್ ಪಿಲ್ಸ್ಬರಿ ಅವರು ಅಮೆರಿಕದ ಸಂಸದೀಯ ಸಮಾವೇಶದಲ್ಲಿ ಶುಕ್ರವಾರ ನೇರ ಮಾತುಗಳಲ್ಲಿ ಹೇಳಿದರು.