ಕಾರ್ಕಳ, ಏ. 13(DaijiworldNews/AA): ಲೋಕಸಭಾ ಚುನಾವಣೆ ವೇಳೆ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಶನಿವಾರ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮತದಾರ ಪಟ್ಟಿಯ ಭಾಗದ ಸಂಖ್ಯೆ 150 ಕ್ರಮ ಸಂಖ್ಯೆ ಸಾಣೂರಿನಲ್ಲಿ ಮನೆ ಮನೆ ಮತದಾನಕ್ಕೆ ಚಾಲನೆ ನೀಡಲಾಯಿತು.
![](https://daijiworld.ap-south-1.linodeobjects.com/Linode/img_tv247/AA-130424-matadana.jpg)
ಸಾಣೂರು ನಿವಾಸಿ ಮೋಹನ್ ದಾಸ್ ನಾಯಕ್ (87) ಅವರು ಮನೆಯಲ್ಲಿ ಮತದಾನ ಮಾಡಿದರು.
ಈ ಸಂದರ್ಭ ಚುನಾವಣೆ ಅಧಿಕಾರಿಗಳು ಉಪಸ್ಥಿತರಿದ್ದರು. ಮನೆಯಿಂದ ಮತದಾನ ಮಾಡಲು ಈಗಾಗಲೇ ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಚುನಾವಣಾ ಸಿಬ್ಬಂದಿ ಮನೆಗಳಿಗೆ ತೆರಳಿ ಬ್ಯಾಲೆಟ್ ಪೇಪರ್ ಮೂಲಕ ಗೌಪ್ಯ ಮತದಾನ ಮಾಡಿಸಿದ್ದಾರೆ.