ಅಂತರಾಷ್ಟ್ರೀಯ ರೇಟಿಂಗ್ ಸಂಸ್ಥೆ "ಮೂಡೀಸ್" ಮೋದಿ ಸರ್ಕಾರಕ್ಕೆ ನೀಡಿದ್ದ ರೇಟಿಂಗ್ ನಿಂದ ಕ್ರಿಕೆಟರ್ "ಟಾಮ್ ಮೂಡಿ" ಪೇಚಿಗೆ ಸಿಲುಕಿದ್ದಾರೆ. ಸನ್ ರೈಸರ್ ಹೈದರಾಬಾದ್ ನ ಹೆಡ್ ಕೋಚ್ ಆಗಿರುವ ಆಸ್ಟ್ರೇಲಿಯಾದ ಮೂಡಿ ಟಾಮ್ ಪೇಸ್ ಬುಕ್ ಪೇಜ್ ನಲ್ಲಿ, ನರೇಂದ್ರ ಮೋದಿ ವಿರೋಧಿ ಮಲಯಾಳಿಗಳು ರೇಟಿಂಗ್ ವಿರುದ್ದ ಹಾರಿಹಾಯ್ದಿದ್ದಾರೆ. ಆದ್ರೆ ರೇಟಿಂಗ್ ನೀಡಿದ್ದು ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ `ಮೂಡೀಸ್’ ಆಗಿದ್ದು, ರೇಟಿಂಗ್ ನ್ನು ವ್ಯಂಗ್ಯ ಮಾಡಲು ಹೋಗಿ ಕಾಮೆಂಟ್ ಹಾಗಿದವರು ತಾವೇ ನಗೆ ಪಾಟಿಲಿಗೀಡಗಿದ್ದಾರೆ. ಇದರಲ್ಲಿ ಹೆಚ್ಚಿನವರು ಕೇರಳಿಗರಾಗಿದ್ದು ಇದೀಗ ಇದರ ಸ್ಕೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ರೇಟಿಂಗ್ ಏನು?
ಸುಲಭ ವಹಿವಾಟು ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು 100ನೇ ಸ್ಥಾನ ಪಡೆದಿದ್ದ ಭಾರತಕ್ಕೆ ಈಗ ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ `ಮೂಡೀಸ್’ ಬಿಎಎ2 ರೇಟಿಂಗ್ ನೀಡಿ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಹೊಗಳಿತ್ತು . 13 ವರ್ಷದ ಬಳಿಕ ಮೂಡೀಸ್ ರೇಟಿಂಗ್ ಮೇಲ್ದರ್ಜೆಗೆ ಏರಿದ್ದು, 2004ರಲ್ಲಿ ಭಾರತಕ್ಕೆ `ಬಿಎಎ3′ ರೇಟಿಂಗ್ ನೀಡಿತ್ತು. ನೋಟು ನಿಷೇಧ, ಜಿಎಸ್ಟಿ ಜಾರಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿತ್ತು.