ಪುತ್ತೂರು, ಏ. 26(DaijiworldNews/AK):ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದ್ದರೂ ಕಾನೂನು ಉಲ್ಲಂಘನೆ ಮಾಡಿ ಮತದಾನ ಮಾಡುವ ಫೋಟೊ ಮೊಬೈಲ್ನಲ್ಲಿ ತೆಗೆದು ಅದನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೆ ಮಾಡಿದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಆರೋಪಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿರುವ ಆರ್ಯಾಪು ನಿವಾಸಿ ರಂಜಿತ್ ಬಂಗೇರಾ ಎಂಬಾತ ತಾನು ಮತದಾನ ಮಾಡುವ ಸಮಯದಲ್ಲಿ ತನ್ನ ಬೆರಳು ಹಾಗೂ ಮತಯಂತ್ರದ ಫೋಟೊ ಸಹಿತ ಮತ ಚಲಾಯಿಸುವ ಫೋಟೊವನ್ನು ತೆಗೆದು ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದನು.
ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್-2 ರ ಉಸ್ತುವಾರಿ ಅಧಿಕಾರಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.