ಮಂಗಳೂರು, ಜೂ.22(DaijiworldNews/AA): ಪಿಲಿಕುಳ ಪ್ರವಾಸಿ ತಾಣದ ಪಕ್ಕದಲ್ಲಿರುವ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇಲ್ಲಿನ ಮಸೀದಿಯಲ್ಲಿ ಪ್ರವಾಸಿಗರಿಗಾಗಿ ಸುಸಜ್ಜಿತವಾಗಿ ನಿರ್ಮಿಸಲಾದ ಮಹಿಳಾ ನವೀಕೃತ ನೂತನ ನಮಾಝ್ ಕೊಠಡಿಯ ಉದ್ಘಾಟನಾ ಸಮಾರಂಭ ಮಸೀದಿ ಆವರಣದಲ್ಲಿ ನೆರವೇರಿತು.

ನವೀಕೃತ ನೂತನ ನಮಾಝ್ ಕೊಠಡಿಗೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಇದರ ಅಧ್ಯಕ್ಷರಾದ ಮೈಯ್ಯದ್ದಿ, ಖತೀಬರಾದ ಸಫ್ವಾನ್ ಇರ್ಫಾನಿ ಮುಂಡೋಳೆ, ಮಾಜಿ ಅಧ್ಯಕ್ಷರಾದ ಹಾಜಿ ಮಹಮ್ಮದ್ ಹನೀಫ್, ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಸದರ್ ಉಸ್ತಾದ್ ಝುಬೈರ್ ಯಮಾನಿ ಜೋಕಟ್ಟೆ, ಹಿರಿಯರಾದ ಹಾಜಿ ಹನೀಫ್ ಮೌಲವಿ, ಉಪಾಧ್ಯಕ್ಷ ಎ.ಪಿ ಇಕ್ಬಾಲ್, ಸೇರಿ ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಝಾಕ್ ಮಂದಾರ, ಮನ್ಸೂರ್, ಮಹಮ್ಮದ್ ಆರೀಫ್, ಅಬ್ದುಲ್ ಖಾದರ್, ಅಬ್ದುಲ್ ಖಾದರ್ ಎ.ಕೆ, ಶೇಖ್ ಅಬ್ದುಲ್ ಖಾದರ್, ಸುಲೈಮಾನ್, ಅಥಾವುಲ್ಲ, ಇಕ್ಬಾಲ್ ಸಿಎಚ್, ಸಿರಾಜ್ ಮೋನು, ಸೈಫುಲ್ಲಾ, ಅಲ್ತಾಫ್, ಮತ್ತಿತರರು ಉಪಸ್ಥಿತರಿದ್ದರು.