ಉಡುಪಿ, ಜೂ.22(DaijiworldNews/AK): 2024ರ ಜೂನ್ 16ರಂದು ಕಮಲಶಿಲೆ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ. ಜೂನ್ 16, 2024 ರ ಮುಂಜಾನೆ, ಸುಮಾರು 2:30 ಸಮಯದಲ್ಲಿ, ಕಮಲಶಿಲೆ ದೇವಸ್ಥಾನದ ಗೋಶಾಲೆಯ ಬಳಿ ಜಾನುವಾರು ಕಳ್ಳತನದ ಯತ್ನ ವರದಿಯಾಗಿದೆ.


ಘಟನೆಯ ಕುರಿತು ಸೆಕ್ಯೂರಿಟಿ ಗಾರ್ಡ್ ರಾಜು ಅವರು ಮಾಹಿತಿ ನೀಡಿದ್ದು, ಅವರು ಕೂಡಲೇ ಶಂಕರನಾರಾಯಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ ಪೊಲೀಸ್ ಸಿಬ್ಬಂದಿಯೊಂದಿಗೆ ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ನಾಸಿರ್ ಹುಸೇನ್ ಮತ್ತು ಪಿಎಸ್ಐ (ತನಿಖೆ) ಶಂಭುಲಿಂಗಯ್ಯ ಎಂ. ನೇತೃತ್ವದಲ್ಲಿ ನಡೆದ ತನಿಖೆಯು ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳನ್ನು ಮಂಗಳೂರು ಬಜ್ಪೆ ನಿವಾಸಿ ವಾಜಿದ್ ಜೆ.(26) ಹಾಗೂ ಮಂಗಳೂರು ಬಜ್ಪೆ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಫೈಝಲ್(40) ಎಂದು ಗುರುತಿಸಲಾಗಿದೆ.
ಪೊಲೀಸರು ಜೂನ್ 22, 2024 ರಂದು ಶಂಕಿತರನ್ನು ಬಂಧಿಸಿದರು ಮತ್ತು ಅಪರಾಧಕ್ಕೆ ಬಳಸಿದ ಹುಂಡೈ ಕ್ರೆಟಾ ಕಾರನ್ನು ವಶಪಡಿಸಿಕೊಂಡರು. ಬಂಧನದ ನಂತರ, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.