ಬಂಟ್ವಾಳ,ಜೂ 23 (DaijiworldNews/MS): ಪೆಟ್ರೋಲ್ ಹಾಕುವ ಉದ್ದೇಶದಿಂದ ನಿಲ್ಲಿಸಿದ ಬೈಕ್ ಗೆ ಪಿಕಪ್ ವಾಹನ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ. ಅಮ್ಟಾಡಿ ಗ್ರಾಮದ ನಲ್ಕೆಮಾರ್ ನಿವಾಸಿ ವೀರಣ್ಣ ಗೌಡ ಗಾಯಗೊಂಡ ವ್ಯಕ್ತಿ.

ಕರ್ತವ್ಯದ ನಿಮಿತ್ತ ಫರಂಗಿಪೇಟೆಗೆ ತೆರಳುವ ವೇಳೆ ಪೆಟ್ರೋಲ್ ಹಾಕುವ ಉದ್ದೇಶದಿಂದ ಪಂಪ್ ಗೆ ತೆರಳುವ ಮುನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗೆ ಬಿ.ಸಿ.ರೋಡಿನ ಕಡೆಯಿಂದ ಫರಂಗಿಪೇಟೆಯ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಲ್ಲಿಸಿದ ಬೈಕ್ ನಲ್ಲಿ ಕುಳಿತುಕೊಂಡಿದ್ದ ಚಾಲಕ ವೀರಣ್ಣ ಗೌಡ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಸವಾರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.