ಉಡುಪಿ, ಜು. 09(DaijiworldNews/AK):ಭೀಕರ ಮಳೆಯಿಂದ ತತ್ತರಿಸಿ ಹೋಗಿದ್ದ ಉಡುಪಿ ಜಿಲ್ಲೆಯ ನಿವಾಸಿಗಳ ಜನಜೀವನ ಸಹಜ ಸ್ಥಿತಿ ಗೆ ಮರಳುತ್ತಿದೆ. ಕಳೆದ ಒಂದು ವಾರದಿಂದ ಧಾರಕಾರ ಮಳೆ ಸುರಿಯುತ್ತಿದ್ದ ಮಳೆರಾಯ ಇಂದು ಮಂಗಳವಾರ ಅಲ್ಪ ವಿಶ್ರಾಂತಿ ನೀಡಿದಂತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಯಾಗಿದ್ದು, ಸೋಮವಾರದಂದು ಜಿಲ್ಲೆಯ ಹಲವೆಡೆ ಮಳೆಯಿಂದಾಗಿ ಹಲವು ಅವಾಂತರಗಳು ಅಸ್ತಿ ಪಾಸ್ತಿಗೆ ಅಪಾರ ಹಾನಿ ಉಂಟಾಗಿತ್ತು.
ನಿನ್ನೆ ಮನೆಯೊಳಗೆ ನೆರೆ ನೀರು ತುಂಬಿದ್ದ ಕಡೆ ಇಂದು ನೀರು ತಗ್ಗಿದ್ದು ಜನಜೀವನ ಯಥಃ ಸ್ಥಿತಿಗೆ ಬಂದಿದೆ.