ಕಾಸರಗೋಡು, ಜು. 10(DaijiworldNews/AK):ಉಪ್ಪಳ ಮುಸೋಡಿ ಯಲ್ಲಿ ಕಡಲ್ಕೊರೆತ ಅಬ್ಬರ ತೀವ್ರ ಗೊಂಡಿದೆ. ಇದರಿಂದ ತೀರವಾಸಿಗಳು ಆತಂಕದಲ್ಲಿದ್ದಾರೆ.

ಮೂಸಾ ಎಂಬವರ ಮನೆ ಸಮುದ್ರ ಪಾಲಾಗಿದೆ. ಐದಕ್ಕೂ ಅಧಿಕ ಮನೆಯು ಅಪಾಯದಲ್ಲಿದೆ. ಕಡಲ್ಕೊರೆತ ದ ಅಬ್ಬರಕ್ಕೆ ಮೀಟರ್ ಗಳಷ್ಟು ತೀರ ವನ್ನು ಸಮುದ್ರ ಸೆಳೆದು ಕೊಂಡಿದೆ.
ಹಲವು ತೆಂಗುಗಳು ಸಮುದ್ರ ಪಾಲಾಗಿವೆ. ಹಲವು ಕುಟುಂಬ ಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ . ಶಾರದಾ ನಗರ , ಮಣಿ ಮುಂಡ , ಹನುಮಾನ್ ನಗರ ಮೊದಲಾದೆಡೆ ಕಡಲ್ಕೊರೆತ ದ ಅಬ್ಬರ ಹೆಚ್ಚಾಗಿದೆ. ನೂರಕ್ಕೂ ಅಧಿಕ ಕುಟುಂಬಗಳು ಆತಂಕದಲ್ಲೇ ದಿನ ದೂಡುವಂತಾಗಿದೆ.