ಮಂಗಳೂರು, ಜು. 16(DaijiworldNews/AA): ವಿದ್ಯುತ್ ಕಂಬ ಏರಿದ ದೊಡ್ಡ ಹೆಬ್ಬಾವೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಸೋಮವಾರ ಸಂಭವಿಸಿದೆ.

ವಿದ್ಯುತ್ ಕಂಬ ಏರಿದ ಹೆಬ್ಬಾವು ತಂತಿಗಳು ಸ್ಪರ್ಶಿಸುತ್ತಿದ್ದಂತೆ ಮೃತಪಟ್ಟಿದೆ. ಈ ಘಟನೆಯ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಹೆಬ್ಬಾವಿನ ತೆರವು ಕಾರ್ಯಾಚರಣೆ ನಡೆಸಿದರು.