ಸುಳ್ಯ, ಜು. 16(DaijiworldNews/AA): ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ನಡೆದ ವಾಹನ ಅಪಘಾತವೊಂದರ ಬಗ್ಗೆ ಸ್ಥಳ ಮಹಜರು ನಡೆಯುವ ಸಂದರ್ಭದಲ್ಲಿ ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಐವರ್ನಾಡಿನ ವೆಂಕಟ್ರಮಣ ಎಂದು ಗುರುತಿಸಲಾಗಿದೆ.
ಮೃತಪಟ್ಟವರು ಕರಿಯಮೂಲೆಯಲ್ಲಿ ಶನಿವಾರ ನಡೆದ ಪಿಕಪ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಆಗಮಿಸಿದ್ದರು.