ಸುಳ್ಯ, ಜು. 16(DaijiworldNews/AA): ಅಂಗಡಿ ಹಾಗೂ ಪಕ್ಕದ ಬಸ್ ನಿಲ್ದಾಣಕ್ಕೆ ಮರ ಬಿದ್ದು ಹಾನಿ ಉಂಟಾಗಿದ್ದು, ಅಪಾರ ನಷ್ಟವುಂಟಾದ ಘಟನೆ ಸುಳ್ಯದ ಅಂಗಡಿಮಜಲಿನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.





ಅರಂತೋಡು ಗ್ರಾಮದ ಬಾಜಿನಡ್ಕ ವಸಂತ ಎಂಬವರಿಗೆ ಸೇರಿದ ಅಂಗಡಿ ಮೇಲೆ ಮರ ಬಿದ್ದು ಅಂಗಡಿಯ ಗೋಡೆ, ಮೇಲ್ಚಾವಣಿ ಕುಸಿದಿದೆ. ಪರಿಣಾಮ ಅಂಗಡಿಯಲ್ಲಿದ್ದ ದಿನಸಿ ಸಾಮಾಗ್ರಿಗಳು ಮಳೆಯಲ್ಲಿ ಒದ್ದೆಯಾಗಿ ನಷ್ಟ ಉಂಟಾಗಿದೆ. ಜೊತೆಗೆ ಪಕ್ಕದ ಬಸ್ಸು ನಿಲ್ದಾಣದ ಮೇಲೂ ಮರ ಬಿದ್ದು ಹಾನಿ ಉಂಟಾಗಿದೆ.
ಇನ್ನು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕಿನಲ್ಲಿ ಅಪಾರ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ.