ಉಡುಪಿ, ಜು 15(DaijiworldNews/ AK): ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ 2024-2027ನೇ ಸಾಲಿನ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಮೂಳೂರು ಗಿರಿಧರ್ ಎಸ್ ಸುವರ್ಣ ಅವರು ನೇಮಕಗೊಂಡಿದ್ದಾರೆ.

ಸಮಿತಿಯ ಎಲ್ಲ ಸದಸ್ಯರ ಸರ್ವಾನುಮತದ ಒಪ್ಪಿಗೆಯೊಂದಿಗೆ ನೇಮಕ ಮಾಡಲಾಗಿದೆ. ದೇವಸ್ಥಾನದ ಆಡಳಿತ ಸಮಿತಿಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಡಿಪಟ್ಣ ನಾರಾಯಣ ಸಿ ಕರ್ಕೇರ ಹಾಗೂ ಕೋಶಾಧಿಕಾರಿಯಾಗಿ ಸುಧಾಕರ ಕುಂದರ್, ಬಂಕೇರಕಟ್ಟ, ಮಲ್ಪೆ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯಲ್ಲಿ ಮೋಹನ್ ಬಂಗೇರ, ಕಾಪು ಮತ್ತು ದಿನೇಶ್ ಎರ್ಮಾಳ್ ಸಹ ಸದಸ್ಯರಾಗಿದ್ದಾರೆ.