ಕಾಸರಗೋಡು, ಜು. 17(DaijiworldNews/AK):ಜೂಜಾಟದಲ್ಲಿ ತೊಡಗಿದ್ದ 14 ಮಂದಿಯನ್ನು ಬೇಕಲ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಂದ 2 . 52 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ಮುಂಜಾನೆ ಬೇಕಲ ಫೋರ್ಟ್ ರೆಸಾರ್ಟ್ ನ ಕೊಠಡಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಇವರ ಬಳಿ ಇದ್ದ 2, 52, 170 ರೂ .ವನ್ನು ವಶಪಡಿಸಿಕೊಳ್ಳಲಾಗಿದೆ.