ಬೆಂಗಳೂರು,ಮೇ 24(Daijiworld News/MSP): ಪ್ರಧಾನಿ ನರೇಂದ್ರ ಮೋದಿ ಅವರನ್ನು ಛೇಡಿಸುತ್ತಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ಅವರನ್ನು ಇದೀಗ ಶಿಲ್ಪಾ ಗಣೇಶ್ ಛೇಡಿಸಿದ್ದಾರೆ.
ದೇಶಾದ್ಯಂತ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮೋದಿಯವರ ಯೋಜನೆಗಳು, ಅವರ ವಿಚಾರಗಳ ಕುರಿತು ವಿವಾದಾತ್ಮಕವಾಗಿ ಟ್ವೀಟ್ ಮಾಡುತ್ತಿರುವ ರಮ್ಯಾ ಅವರನ್ನು ಶಿಲ್ಪಾ ಗಣೇಶ್ ಈಗ ಎಲ್ಲಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು " ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು " ಎಂದು ಕೇಳಿದ್ದಾರೆ.
ಮೋದಿ ವಿರುದ್ಧ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ರಮ್ಯಾಗೆ ಶಿಲ್ಪಾ ಗಣೇಶ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೆನಲ್ಲ." ಪದೇ ಪದೇ ಈ ಫೋಟೋಶಾಪ್ ಬಳಸಿ ತಿರುಚಿದ ಫೋಟೋ ಬಳಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ನಿಮಗೆ ಶೋಭೆ ನೀಡುವುದಿಲ್ಲ" ಎಂದು ಟ್ವೀಟಿಸಿದ್ದರು.