ವಡ್ನಗರ್,ಮೇ 24(Daijiworld News/MSP): ಮೋದಿ ಸಹಪಾಠಿ ಗೆಳೆಯ ಮೋದಿಯ ಪ್ರಚಂಡ ವಿಜಯಕ್ಕೆ ಹಿಗ್ಗಿದ್ದಾರೆ. ಎರಡನೇ ಬಾರಿಗೆ ಮೋದಿಯ ಪ್ರಧಾನಿಯಾಗುತ್ತಿರುವ ಖುಷಿಯಲ್ಲಿ ಮೋದಿ ಅವರ ಸಹಪಾಠಿಯಾದ ಜಸೂದ್ ಪಠಾಣ್ (70) ದರ್ಗಾಕ್ಕೆ ಹರಕೆ ಸಲ್ಲಿಸಲು ತಯಾರಾಗುತ್ತಿದ್ದಾರೆ.
ಈ ಬಗ್ಗೆ ಅವರ ಸಹಪಾಠಿ ಹೇಳೋದು ಹೀಗೆ ನರೇಂದ್ರ ಮೋದಿಯ ಕ್ಷೇಮಕ್ಕಾಗಿ ಮತ್ತು ಸಮೃದ್ಧಿಗಾಗಿ ನಾನು ಉಪವಾಸ ಕೈಗೊಂಡಿದ್ದೆ. ನನ್ನ ಪ್ರಾರ್ಥನೆಗಳಿಗೆ ಫಲ ಸಿಕ್ಕಿದೆ .ಈ ಹಿನ್ನಲೆಯಲ್ಲಿ ನಾನು ಕೃತಜ್ಞತೆ ಹೇಳಲು ಅಜ್ಮೇರ್ ಶರೀಫ್ ದರ್ಗಾಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಪಠಾಣ್ ಅವರು 1 ನೇ ತರಗತಿಯಿಂದ 11ನೇ ತರಗತಿಯವರೆಗೆ ಮೋದಿ ಅವರ ಕ್ಲಾಸ್ ಮೇಟ್ ಆಗಿದ್ದರು. ಗುಜರಾತ್ನ ವಡ್ನಗರದ ಮೋದಿಯ ಸಹಪಾಠಿ ಜಸೂದ್ ಪಠಾಣ್ ಚುನಾವಣೆಯ ಸಂದರ್ಭ ಮೋದಿ ಗೆಲ್ಲುವಂತೆ ದರ್ಗಾ ಪ್ರಾರ್ಥನೆ ಸಲ್ಲಿಸಿದ್ದರು. ಮೋದಿಯ ಗೆಲುವಿನಿಂದ ಇದೀಗ ಭಾರತಕ್ಕೆ ಮತ್ತಷ್ಟು ಬಲಗೊಳಲ್ಲಿದೆ.ಅದೇ ನಿಟ್ಟಿನಲ್ಲಿ ಸಹಪಾಠಿ ಕೆಲಸ ಮಾಡಲಿದ್ದಾರೆ ಎನ್ನುವ ನಂಬಿಕೆ ಇದೆ. ಉದ್ಯೋಗ ಸೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿಗೆ ಎನ್ಡಿಎ ಸರಕಾರ ಕೆಲಸ ಮಾಡಲಿ ಎಂದು ಆಶಿಸಿದ್ದಾರೆ.