ಪುಲ್ವಾಮ, ಮೇ24(Daijiworld News/SS): ಪುಲ್ವಾಮಾದಲ್ಲಿನ ಟ್ರಾಲ್ನಲ್ಲಿ ಭದ್ರತಾ ಪಡೆಗಳು ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಒಬ್ಬನಾದ ಝಾಕಿರ್ ಮೂಸಾ ಎಂಬಾತನನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಿವೆ.
ಅನ್ಸಾರ್ ಘಝ್ವಾತ್-ಉಲ್ ಹಿಂದ್ಗೆ ಸೇರಿದ ಅಲ್ ಖೈದಾದ ಕಮಾಂಡರ್ ಆಗಿದ್ದ ಮೂಸಾನನ್ನು ಭದ್ರತಾಪಡೆಗಳು ಬಲಿಪಡೆದಿವೆ. ಉಗ್ರ ಅಡಗಿರುವ ಖಚಿತ ಮಾಹಿತಿ ಮೇರೆಗೆ ಟ್ರಾಲ್ನ ದಾದ್ಸರ ಗ್ರಾಮದಲ್ಲಿ ಭದ್ರತಾಪಡೆ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹೊಡೆದುರುಳಿಸಿ, ಎಕೆ – 47 ರೈಫಲ್ ಮತ್ತು ರಾಕೆಟ್ ಲಾಂಚರ್ನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 18ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಪೊಲೀಸರು ಹತ್ಯೆ ಮಾಡಿದ ಬಳಿಕ ಆ ಪ್ರದೇಶದಲ್ಲಿ ಆತಂಕ ಮನೆಮಾಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಎಸ್ಬಿಐ ಬಳಿಯಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಪೋಸ್ಟ್ ಬಳಿ ಗ್ರೇನೇಡ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ.