ಬೆಂಗಳೂರು, ಮೇ24(Daijiworld News/SS): ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಮುಂದುವರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೂಚಿಸಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳೆರಡೂ ಹೀನಾಯ ಸೋಲು ಅನುಭವಿಸಿರಬಹುದು. ಆದರೆ, ಇದರ ಪರಿಣಾಮ ಸರ್ಕಾರದ ಮೇಲೆ ಯಾವುದೇ ರೀತಿಯಲ್ಲೂ ಆಗಬಾರದು ಎಂದು ದೇವೇಗೌಡ ಹೇಳಿದ್ದಾಗಿ ಜೆಡಿಎಸ್ ಮೂಲಗಳು ತಿಳಿಸಿವೆ.
ಮಿತ್ರಪಕ್ಷಗಳಲ್ಲಿ ಏನೇ ಸಮಸ್ಯೆ ಉದ್ಭವಿಸಿದರೂ, ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಹಿರಂಗವಾಗಿ ಕಿತ್ತಾಡಿಕೊಳ್ಳುವುದಾಗಲಿ, ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನಾಗಲಿ ಮಾಡಬಾರದು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾಗಿಯೂ ಮೂಲಗಳು ಹೇಳಿವೆ.