ಶ್ರೀಹರಿಕೋಟ, ಆ.16(DaijiworldNews/AA): ಭೂಮಿ ಪರಿವೀಕ್ಷಣಾ ಇಒಎಸ್-08 ಉಪಗ್ರಹವನ್ನು ಇಸ್ರೋ ಇಂದು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದು, ಉಪಗ್ರಹವು ಉದ್ದೇಶಿತ ಕಕ್ಷೆ ಸೇರಿದೆ.
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡ್ಡಯನ ಕೇಂದ್ರದಿAದ ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿ 9:17 ಕ್ಕೆ ಉಪಗ್ರಹ ಉಡಾವಣೆ ಮಾಡಲಾಯಿತು. ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್-08 ಹೊತ್ತಿದ್ದ ಕಿರು ಉಪಗ್ರಹ ಉಡಾವಣಾ ವಾಹನ-ಆ೩ ನಭಕ್ಕೆ ಹಾರಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಪ್ರಧಾನ ಕಚೇರಿಯ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ, SSLV-D3-EOS-08 ಮಿಷನ್ನ ಉದ್ದೇಶ ಮೈಕ್ರೋಸ್ಯಾಟಲೈಟ್ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿದೆ. ಜೊತೆಗೆ ಭವಿಷ್ಯ ಉಪಗ್ರಹಗಳ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ.
ಇಒಎಸ್-08 ಉಪಗ್ರಹವು ಮೂರು ಪೇಲೋಡ್ಗಳನ್ನು ಹೊಂದಿದೆ. ಅವು ಎಲೆಕ್ಟ್ರೋ ಆಪ್ಟಿಕಲ್ ಇನ್ಫ್ರಾರೆಡ್ ಪೇಲೋಡ್ (EOIR), ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್-ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R) ಮತ್ತು SiC UV ಡೋಸಿಮೀಟರ್ ಆಗಿದೆ.