ನವದೆಹಲಿ, ಆಗಸ್ಟ್ 16, (DaijiworldNews/TA) : ಸದ್ಯಕ್ಕೆ ಯಾವುದೇ ರಾಜ್ಯದಲ್ಲಿಯೂ ಚುನಾವಣೆ ಮಾಡದಿರಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
ಇಂದು ಜಮ್ಮು ಕಾಶ್ಮೀರ ಮತ್ತು ಹರಿಯಾಣ ರಾಜ್ಯಗಳ ಚುನಾವಣೆ ದಿನಾಂಕವನ್ನು ಪ್ರಕಟಿಸಲಾಗಿತ್ತು. ಮುಖ್ಯ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕ ಪ್ರಕಟಿಸಿದ್ದರು. ಈ ವೇಳೆ ಯಾವುದೇ ವಿಧಾನಸಭೆ, ಲೋಕಸಭೆಗೆ ಉಪಚುನಾವಣೆ ನಡೆಸುವುದಿಲ್ಲ ಎಂದು ಹೇಳಲಾಯಿತು.
ಕೆಲವು ರಾಜ್ಯಗಳಲ್ಲಿ ಹವಾಮಾನ ಸರಿ ಇಲ್ಲ. ಅಸ್ಸಾಂ, ಬಿಹಾರ, ಕೇರಳ ಸೇರಿದಂತೆ ಕೆಲವು ಕಡೆ ಪ್ರವಾಹವಿರುವುದರಿಂದ ಆ ರಾಜ್ಯಗಳಲ್ಲಿ ಚುನಾವಣಾ ಮಾಡಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಸುಧಾರಿಸಿದ ಬಳಿಕ ಚುನಾವಣೆ ಮಾಡುತ್ತೇವೆ ಎಂಬುವುದಾಗಿ ತಿಳಿಸಿದರು.