ದೆಹಲಿ, ಆ,16 (DaijiworldNews/AK) :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ವರ್ಷದ ಡಿಸೆಂಬರ್ನಲ್ಲಿ ಗಗನ್ಯಾನ್ ಮಿಷನ್ನ ಮೊದಲ ಪರೀಕ್ಷಾ ಹಾರಾಟವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಶ್ರೀಹರಿಕೋಟಾದಲ್ಲಿ ಹೇಳಿದ್ದಾರೆ.
ಎಸ್ಎಸ್ಎಲ್ವಿಯ ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಹಾರಾಟದ ಯಶಸ್ವಿ ಉಡಾವಣೆ ನಂತರ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಶುಕ್ರವಾರ ಭೂ ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ.
ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಕೆಲವು ರಾಕೆಟ್ ಹಾರ್ಡ್ವೇರ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವನ್ನು ತಲುಪಿದೆ. ಸಿಬ್ಬಂದಿ ಮಾಡ್ಯೂಲ್ನ ಏಕೀಕರಣವು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯುತ್ತಿದೆ ಎಂದು ಸೋಮನಾಥ್ ಹೇಳಿದರು.
ಇಂದು, ನಾವು G1 ಎಂಬ ಗಗನ್ಯಾನ್ನ ಮೊದಲ ಮಿಷನ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೊದಲ ಮಾನವರಹಿತ ಮಿಷನ್. ಇಂದಿನ ಸ್ಥಿತಿ ಏನೆಂದರೆ ರಾಕೆಟ್, S200 ಹಂತ, L1, C32 ಹಂತ ಎಲ್ಲವೂ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಎಂದು ಹೇಳಿದರು.