ನವದೆಹಲಿ, ಆಗಸ್ಟ್ 17, (DaijiworldNews/TA) : ಕ್ಯಾಬಿನೆಟ್ ನೇಮಕಾತಿ ಸಮಿತಿಯು ಹೊಸ ರಕ್ಷಣಾ ಕಾರ್ಯದರ್ಶಿಯಾಗಿ ಆರ್ಕೆ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಕೆ. ಶ್ರೀನಿವಾಸ್ ಅವರನ್ನು ವಸತಿ ಮತ್ತು ನಗರ ಕಾರ್ಯದರ್ಶಿಯಾಗಿ, ವಿವೇಕ್ ಜೋಶಿ ಅವರನ್ನು ಸಿಬ್ಬಂದಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಶುಕ್ರವಾರ ಜಾರಿಗೆ ತಂದ ಅಧಿಕಾರಶಾಹಿ ಪುನರ್ರಚನೆಯ ಭಾಗವಾಗಿ ಹಿರಿಯ ಅಧಿಕಾರಿ ಪುಣ್ಯ ಸಲಿಲ ಶ್ರೀವಾಸ್ತವ ಅವರನ್ನು ಹೊಸ ಆರೋಗ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಸ್ತುತ ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿರುವ ಶ್ರೀವಾಸ್ತವ ಅವರು ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರವಾಗಿ, ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಪ್ರಸ್ತುತ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ನಾಗರಾಜು ಮದ್ದಿರಾಳ ಅವರು ಜೋಶಿ ಅವರ ಬದಲಿಗೆ ನೂತನ ಹಣಕಾಸು ಸೇವೆಗಳ ಕಾರ್ಯದರ್ಶಿಯಾಗಲಿದ್ದಾರೆ.
ಪ್ರಧಾನಿ ಮೋದಿ ಸರ್ಕಾರವು ಪ್ರಮುಖ ಅಧಿಕಾರಶಾಹಿ ವ್ಯವಸ್ಥೆಯ ಪುನಾರಚನೆ ಮಾಡಿದೆ. ಕೇಂದ್ರ ಸರ್ಕಾರವು ಪ್ರಮುಖ ಅಧಿಕಾರಶಾಹಿ ಪುನರ್ರಚನೆಗೆ ಅನುಮೋದನೆ ನೀಡಿದೆ. ವಿವಿಧ ಇಲಾಖೆಗಳಲ್ಲಿ ಹಲವಾರು ಹೊಸ ನೇಮಕಾತಿಗಳನ್ನು ಮಾಡಿದೆ.