ಬೆಂಗಳೂರು, ಮೇ 18 (Daijiworld News/SM): ಲೋಕ ಸಮರದಲ್ಲಿನ ಹೀನಾಯ ಸೋಲಿನಿಂದ ಮನನೊಂದ ಸಿಎಂ ಕುಮಾರಸ್ವಾಮಿ ಸಂಪುಟ ಸಭೆಯಲ್ಲಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು.
ಮಂಡ್ಯದಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ತುಮಕೂರಿನಲ್ಲಿ ದೇವೇಗೌಡರ ಸೋಲಿನಿಂದ ಸಿಎಂ ರಾಜೀನಾಮೆಯ ಚಿಂತನೆ ನಡೆಸಿದ್ದರು. ಈ ಬಗ್ಗೆ ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಇದೀಗ ರಾಜೀನಾಮೆ ನೀಡದಂತೆ ಪಕ್ಷದ ಹಿರಿಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ರಾಜೀನಾಮೆ ಚಿಂತನೆ ವಿಷಯ ತಿಳಿದ ರಾಹುಲ್ ಗಾಂಧಿ, ಕುಮಾರಸ್ವಾಮಿಯವರಿಗೆ ಫೋನ್ ಮಾಡಿ ಮನವೊಲಿಕೆ ಮಾಡಿದ್ದಾರೆ. ಸಿಎಂ ಸ್ಥಾನದಲ್ಲಿ ಮುಂದುವರೆಯಲು ಕುಮಾರಸ್ವಾಮಿಗೆ ಸೂಚಿಸಿದ್ದಾರೆ.
ರಾಝ್ಯದಲ್ಲಿ ಲೋಕಸಭೆಯ ಫಲಿತಾಂಶದಲ್ಲಿ ತೀವ್ರ ಹಿನ್ನೆಡೆಯಾದರೂ ಕೂಡ ಮೈತ್ರಿ ಮುರಿಯುವುದು ಬೇಡ ಎಂದು ಸೂಚಿಸಿದ್ದಾರೆ. ಕಾಂಗ್ರೆಸ್ ನಾಯಕರು ನಿಮ್ಮ ನೇತೃತ್ವದಲ್ಲಿ ಮುಂದುವರೆಯುತ್ತಾರೆ. ಫಲಿತಾಂಶದಿಂದ ಆತಂಕ ಬೇಡ ಎಂದು ರಾಹುಲ್ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯದ ಹಿರಿಯ ನಾಯಕರ ಮೂಲಕವೂ ಕೂಡ ಫೋನ್ ಮೂಲಕ ಸಿಎಂ ಸ್ಥಾನ ಮುಂದುವರೆಸುವಂಟೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇತ್ತ ದೇವೇಗೌಡರೂ ಕೂಡ ಇದೇ ಮಾತನ್ನು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ನಾಯಕರ ಒತ್ತಾಯ, ಸೂಚನೆಯ ಬಳಿಕ ಸಿಎಂ ಪ್ರತಿಕ್ರಿಯೆ ನೀಡಿದ್ದು, ನಿಮ್ಮೆಲ್ಲರ ಇಚ್ಛೆಯಂತೆ ಬೆಂಬಲ ಇರುವ ತನಕ ನಾನು ಈ ಸ್ಥಾನದಲ್ಲಿ ಮುಂದುವರೆಯುವುದಾಗಿ ಹೆಚ್ ಡಿಕೆ ತಿಳಿಸಿದ್ದಾರೆ.