ಬೆಂಗಳೂರು, ಆಗಸ್ಟ್ 17, (DaijiworldNews/TA) : ರಾಜ್ಯ ರಾಜಕಾರಣದಲ್ಲಿ ಸಿಎಂ ವಿರುದ್ಧದ ಮುಡಾ ಕೇಸ್ ಬಹಳಷ್ಟು ಸದ್ದು ಮಾಡಿತ್ತು. ಇದೀಗ ಮುಡಾ ಅಕ್ರಮ ಕೇಸ್ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ.
ಅಬ್ರಾಹಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ. ಅನುಮತಿ ದೊರೆತ ನಂತರ ಸಚಿವ ಎಂ.ಬಿ ಪಾಟೀಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸಿಎಂ ಸಿದ್ದರಾಮಯ್ಯ ಪರ ವಾಗ್ವಾದ ನಡೆಸಿದ್ದಾರೆ.
'ನಾವು ರಾಜ್ಯಪಾಲರರಿಂದ ಇದನ್ನು ಅಪೇಕ್ಷೆ ಮಾಡಿರಲಿಲ್ಲ. ಮುಡಾದಲ್ಲೆ ಬಾರಿ ಹಗರಣ ನಡೆದಿದೆ. ಮುಡಾ ಮೇಲೆಯೇ ಲೆಕ್ಕವಿಲ್ಲದಷ್ಟು ಆರೋಪಗಳಿವೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಗವರ್ನರ್ ಕೇಂದ್ರದ ಕೈಗೊಂಬೆ ಯಾಗಿ ಕೆಲಸ ಮಾಡ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಮುಂದುವರಿದ ಚಾಳಿಯಂತೆ ಇಲ್ಲೂ ಮಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದ ಜನರು ಇದನ್ನು ಸಹಿಸೋದಿಲ್ಲ ಎಂದಿದ್ದಾರೆ.