ಬೆಂಗಳೂರು, ಆಗಸ್ಟ್ 17, (DaijiworldNews/TA) : ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು . ಇದು ಸೈಟ್ ಗಾಗಿ ಕಾಯುತ್ತಿದ್ದ 86 ಸಾವಿರ ಜನರಿಗೆ ಸಿಕ್ಕ ಜಯ. ಸಿಎಂ ವಿರುದ್ಧ ಕೇಸ್ ಹಾಕುವಾಗ ಅನುಮತಿ ಬೇಕು. ಈಗ ಅದನ್ನು ರಾಜ್ಯಪಾಲರು ನೀಡಿದ್ದಾರೆ. ನಮ್ಮ ಪಾದಯಾತ್ರೆ ಯಶಸ್ವಿ ಆಗಿದೆ.
ನಮ್ಮ ಹೋರಾಟ ವ್ಯಕ್ತಿ ವಿರುದ್ಧ ಅಲ್ಲ. ಅಕ್ರಮ ಹೊರಬರಬೇಕು. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಸತ್ಯಾಸತ್ಯತೆ ಹೊರಬರಲಿ. ಕಾಂಗ್ರೆಸ್ನದ್ದು ಇಂಥ ನೂರಾರು ಪ್ರಕರಣ ಇದೆ ಎಂಬುವುದಾಗಿ ಮುಡಾ ಕೇಸ್ ನ ವಿಚಾರವಾಗಿ ರಾಜ್ಯಪಾಲರ ಆದೇಶ ಬರುತ್ತಿದ್ದಂತೆ, ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಅನ್ನೋದೇ ನಮ್ಮ ಅಜೆಂಡಾ. ಆಗ ಯಡಿಯೂರಪ್ಪ ಮೇಲೆ ವಿಚಾರಣೆಗೆ ಅನುಮತಿ ನೀಡಿತ್ತು. ಆಗ ಅದು ಕಾಂಗ್ರೆಸ್ ಕೈವಾಡ ಎಂದಿದ್ವಾ? ಈಗ ಸಿದ್ದರಾಮಯ್ಯಗೆ ಮಾತ್ರ ಒಂದು ನ್ಯಾಯನಾ? ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ನೈತಿಕತೆ ಜವಬ್ದಾರಿ ಇದೆ. ಅವರು ರಾಜೀನಾಮೆ ನೀಡುತ್ತಾರೆ ಎಂದು ಭಾವಿಸುತ್ತೇವೆ. ಎಂಬುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.