ಬಳ್ಳಾರಿ, ಆ.17(DaijiworldNews/AA): ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ಗೆ 3 ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಮೂರು ಸ್ಟಾಪ್ ಲಾಗ್ ಅಳವಡಿಸಿದ್ದರಿಂದಾಗಿ ನೀರು ಡ್ಯಾಂನಿಂದ ಹೊರ ಹರಿಯುವುದು ನಿಂತಿದೆ.
ಇದೀಗ ಗೇಟ್ ಅಳವಡಿಕೆ ಯಶಸ್ವಿಯಾದ ಬೆನ್ನಲ್ಲೇ ಜಲಾಶಯದ ಎಲ್ಲಾ 33 ಗೇಟ್ಗಳನ್ನು ಸಿಬ್ಬಂದಿಗಳು ಬಂದ್ ಮಾಡಿದ್ದು, ನೀರು ಪೋಲಾಗುತ್ತಿರುವುದನ್ನು ತಡೆಯಲಾಗಿದೆ.
ಈಗ ಕೇವಲ ಗೇಟ್ 19 ರಿಂದ ಅಲ್ಪ ಪ್ರಮಾಣದ ನೀರು ಮಾತ್ರ ಹೊರ ಹೋಗುತ್ತಿದೆ. ಸದ್ಯ 70 ಟಿಎಂಸಿ ನೀರು ಜಲಾಶಯದಲ್ಲಿದೆ. 105 ಟಿಎಂಸಿ ನೀರು ನಿಲ್ಲಿಸಲು ಐದು ಸ್ಟಾಪ್ ಗೇಟ್ಗಳನ್ನು ಅಳವಡಿಲು ತುಂಗಭದ್ರಾ ಮಂಡಳಿ ಮುಂದಾಗಿದೆ.
19ನೇ ಕ್ರಸ್ಟ್ಗೇಟ್ ಕೊಚ್ಚಿ ಹೋಗಿದ್ದರಿಂದ ಒಟ್ಟು ಐದು ಗೇಟ್ ಅಳವಡಿಸುವ ಕಾರ್ಯ ಆರಂಭವಾಗಿದೆ. ಶುಕ್ರವಾರ ರಾತ್ರಿ ಮೊದಲ ಸ್ಟಾಪ್ಗೇಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು. ಇದೀಗ ಮತ್ತೆರಡು ಸ್ಟಾಪ್ಗೇಟ್ಗಳನ್ನು ಅಳವಡಿಸಲಾಗಿದೆ. ಇಂದು ಅಥವಾ ನಾಳೆ ಸಂಪೂರ್ಣ ಗೇಟ್ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ.