ಬೆಂಗಳೂರು, ಆ.18 (DaijiworldNews/AK) :ಮುಡಾ ಹಗರಣ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆ ನಡೆಸುವುದಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಕೊನೆಗೂ ಅನುಮತಿ ನೀಡಿದ್ದಾರೆ.
ಇದು ಈಗ ರಾಷ್ಟ್ರಮಟ್ಟದಲ್ಲಿ ರಾಜಕೀಯ ಸಂಚಾಲನವನ್ನೆ ಸೃಷ್ಟಿಸಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ಪಕ್ಷವು ರಾಜ್ಯ ಸರಕಾರ ಹಾಗೂ ಪಕ್ಷ ಸಿದ್ದರಾಮಯ್ಯನವರ ಜತೆ
ಗಟ್ಟಿಯಾಗಿ ನಿಲ್ಲುವ ನಿರ್ಧಾರವನ್ನು ಸದ್ಯಕ್ಕೆ ತೋರಿದ್ದು, ರಾಜ್ಯಪಾಲರ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ.
ಎಸ್.ಪಿ. ಪ್ರದೀಪ್ ಕುಮಾ ರ್, ಟಿ.ಜೆ. ಅಬ್ರಹಾಂ ಹಾಗೂ ಮೈಸೂರಿನ ಸ್ನೇ ಹಮಯಿ ಕೃಷ್ಣ ಸಲ್ಲಿಸಿದ್ದ ಪ್ರತ್ಯೇ ಕ ಅರ್ಜಿಗೆ ಸಂಬಂಧಿಸಿ ಸುದೀರ್ಘ ಕಾನೂನು ಸಲಹೆ ಹಾಗೂ ಚರ್ಚೆಗಳನ್ನು ಪರಿಗಣಿಸಿದ ಬಳಿಕ ರಾಜ್ಯಪಾಲರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ವಿರುದ್ಧ ನಿಷ್ಪಕ್ಷ ತನಿಖೆಗೆ ಪ್ರಸ್ತಾವಿಸಿದ್ದಾರೆ. ಮಧ್ಯಪ್ರದೇಶ ಮತ್ತಿತರ ಈ ಹಿಂದಿನ ಪ್ರಕರಣಗಳನ್ನು ತಮ್ಮ ಆದೇಶದಲ್ಲಿ ಅವರು ಉಲ್ಲೇ ಖಿಸಿದ್ದು, ಅಭಿಯೋಜನೆಯ ಅನುಮತಿ ಪ್ರತಿಯನ್ನು ಮುಖ್ಯ ಕಾರ್ಯದರ್ಶಿ ಹಾಗೂ ದೂರುದಾರರಿಗೆ ಕಳುಹಿಸಿ ಕೊಡಲಾಗಿದೆ.