ಪಟನಾ, ಆ.18 (DaijiworldNews/TA) : ಬಿಹಾರದಲ್ಲಿ 1,710 ಕೋಟಿ. ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಗುವಾನಿ ಮತ್ತು ಸುಲ್ತಾನ್ ಗಂಜ್ ಸೇತುವೆಯ ಒಂದು ಭಾಗ ಶನಿವಾರ ಕುಸಿದಿದೆ. ಇದು ಮೂರನೇ ಬಾರಿಯ ಕುಸಿತ.
ಕಳೆದ ಮೂರು ವರ್ಷಗಳಲ್ಲಿ ಈ ಸೇತುವೆ ಕುಸಿದಿದ್ದು, ಸೇತುವೆಯ 9 ಮತ್ತು 10ನೇ ಕಂಬದ ನಡುವಿನ ಭಾಗ ಕುಸಿದು ಗಂಗಾನದಿ ಪಾಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು- ನೋವು ಸಂಭವಿಸಿಲ್ಲ.
ಬಿಹಾರದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ ಅಗುವಾನಿ - ಸುಲ್ತಾನ್ ಗಂಜ್ ಸೇತುವೆ. ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. 2014ರಲ್ಲಿ 3.1 ಕಿ.ಮೀ ಉದ್ದದ ಈ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಈ ವರ್ಷದ ಆರಂಭದಿಂದ ಇದುವರೆಗೂ ಬಿಹಾರದಲ್ಲಿ ಕನಿಷ್ಠ 12 ಸೇತುವೆಗಳು ಕುಸಿದಿವೆ.