ದೆಹಲಿ, ಆ.19(DaijiworldNews/AA): ಬೆಲೆ ಬಾಳುವ ಐಫೋನ್ಗಾಗಿ ಯುವಕನೋರ್ವ ಮೂರು ದಿನಗಳ ಉಪವಾಸ ಮಾಡಿ ದೇವಸ್ಥಾನದ ಹೊರಗೆ ಹೂ ವ್ಯಾಪಾರ ಮಾಡುವ ತನ್ನ ತಾಯಿಯನ್ನು ಒಪ್ಪಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವೈರಲ್ ಆದ ಇ ವಿಡಿಯೋದಲ್ಲಿ 'ಹೂವು ಮಾರಾಟ ಮಾಡುವ ತಾಯಿ ಹಾಗೂ ಆಕೆಯ ಮಗ ಮೊಬೈಲ್ ಖರೀದಿಸಲು ಅಂಗಡಿಗೆ ಬಂದಿದ್ದಾರೆ. ಈ ವೇಳೆ ಆತನ ತಾಯಿ ತಾನು ದೇವಸ್ಥಾನದ ಹೊರಗೆ ಹೂವುಗಳನ್ನು ಮಾರಾಟ ಮಾಡುತ್ತೇನೆ. ಐಪೋನ್ ಗಾಗಿ ತನ್ನ ಮಗ ಮೂರು ದಿನಗಳಿಂದ ಉಪವಾಸವಿದ್ದು ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ.
ಇನ್ನು ಮಗನ ಬೇಡಿಕೆಗೆ ಒಪ್ಪಿ ಫೋನ್ ಖರೀದಿ ಮಾಡಲು ಹಣ ನೀಡಿದ್ದೇನೆ. ತನ್ನ ಮಗ ಫೋನ್ ಬಿಲ್ ಮಾಡಿದಷ್ಟೇ ಹಣ ಸಂಪಾದಿಸಿ ತನಗೆ ಮರಳಿ ಕೊಡಬೇಕು. ನಾನು ಸಂತೋಷವಾಗಿದ್ದೇನೆ ಆದರೆ ಅವನು ಸಂಪಾದಿಸಿ ಹಣವನ್ನು ಮರಳಿ ತರಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.
"ನಾಚಿಕೆಗೇಡು!!! ಅಮ್ಮ ಹಣ ನೀಡುವ ಬದಲು ಚಪ್ಪಲಿಯಿಂದ ಹೊಡೆದು ಅವನನ್ನು ಹಸಿವಿನಿಂದ ಬಿಡಬೇಕಿತ್ತು. ಈ ಸ್ವಾರ್ಥಿ ಬಗ್ಗರ್ಗಳು ತಮ್ಮ ದುರಾಸೆಗಾಗಿ ಸ್ವಂತ ಪೋಷಕರನ್ನು ಮಾರಲು ಹಿಂಜರಿಯುವುದಿಲ್ಲ. ಹಣವನ್ನು ನೀಡದಿದ್ದರೆ ಅವನು ಆ ತಾಯಿಯನ್ನು ಕೊಲ್ಲುತ್ತಿದ್ದನು" ಎಂದು ಟೀಕೆ ಮಾಡಿದ್ದಾರೆ.