ಬೆಂಗಳೂರು,ಮೇ 25 (Daijiworld News/MSP): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ 2019-20 ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಲಿದೆ.
ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕೆಇಎ ಏ. 29 ಮತ್ತು 30 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿತ್ತು. 1,94,311 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೆಇಎ ಪ್ರಾಧಿಕಾರ ಸಭಾಂಗಣದಲ್ಲಿ ಇಂದು ಬೆಳಗ್ಗೆ 10.50ಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ - ಬೆಂಗಳೂರಿನ ಜಫಿನ್ ಬಿಜುಗೆ ಪ್ರಥಮ ಸ್ಥಾನ, ಮಂಗಳೂರಿನ ಚಿನ್ಮಯ್ ದ್ವಿತೀಯ ಸ್ಥಾನ ಹಾಗೂ ಸಾಯಿ ಸಾಕೇತಿಕ ಚೆಕೂರಿ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ
ನ್ಯಾಚುರೋಪತಿ ಮತ್ತು ಯೋಗ: ಮಹೇಶ್ ಆನಂದ್ (ಪ್ರಥಮ) ಬೆಂಗಳೂರು,ವಸುದೇವ್ (ದ್ವಿತೀಯ) ಮೈಸೂರು, ಉದಿತ್ ಮೋಹನ್ (ತೃತೀಯ) ಬೆಂಗಳೂರು
ಬಿಎಸ್ಸಿ ಕೃಷಿ: ಕೀರ್ತನಾ ಎಂ ಅರುಣ್ (ಪ್ರಥಮ) ಬೆಂಗಳೂರು, ಭುವನ್ ಬಿ (ದ್ವಿತೀಯ) ಮಂಗಳೂರು, ಶ್ರೀಕಾಂತ್ ಎಂಲ್ (ತೃತೀಯ) ಹಾಸನ
ಬಿಎಸ್ಸಿ ಪಶುವಿಜ್ಞಾನ: ಪಿ ಮಹೇಶ್ ಆನಂದ್ (ಪ್ರಥಮ) ಬೆಂಗಳೂರು, ಉದಿತ್ ಮೋಹನ್ (ದ್ವಿತೀಯ) ಬೆಂಗಳೂರು, ಸಾಯಿ ರಾಮ್ (ತೃತೀಯ) ಬೆಂಗಳೂರು
ಫಾರ್ಮಸಿ: ಸಾಯಿ ಸಾಕೇತಿಕಾ ಚೆಕೂರಿ(ಪ್ರಥಮ) ಬೆಂಗಳೂರು,ಜಫಿನ್ ಬಿಜು(ದ್ವಿತೀಯ) ಬೆಂಗಳೂರು,ಆರ್.ಚಿನ್ಮಯ್ (ತೃತೀಯ)