ಮೈಸೂರು, ಆ.20(DaijiworldNews/AK): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ನಾಳೆ ದಸರಾ ಗಜಪಡೆ ಕಾಡಿನಿಂದ ನಾಡಿಗೆ ಪಯಣ ಆರಂಭಿಸಲಿವೆ.
ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸಲಿವೆ.
ಎರಡನೇ ತಂಡದಲ್ಲಿ 5 ಆನೆಗಳು ಬರಲಿದೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತು ಕೂಡ ಮಾಡಲಾಗಿದೆ. ನಾಡಿಗೆ ಬರುವ ಈ ಗಜಪಡೆಗೆ ಆ.23 ರಂದು ಮೈಸೂರು ಅರಮನೆಯಲ್ಲಿ ಅದ್ಧೂರಿಯಿಂದ ಸ್ವಾಗತಿಸಲಾಗುತ್ತದೆ.
ಕೊಡಗು ಜಿಲ್ಲೆ ದುಬಾರೆ ಸಾಕಾನೆ ಶಿಬಿರದಿಂದ ಕಂಜನ್, ಧನಂಜಯ, ಗೋಪಿ, ಅನೆಗಳು ಒಂದು ತಿಂಗಳ ಭರ್ಜರಿ ಪೂರ್ವಸಿದ್ಧತೆಯೊಂದಿಗೆ ನಾಳೆ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.